ಸಣ್ಣ ರಾಷ್ಟ್ರಗಳ ಕೂಟವೊಂದು ಜಗತ್ತನ್ನು ನಿರ್ವಹಿಸುವ ಕಾಲ ಮುಗಿದು ಹೋಗಿದೆ. ಇನ್ನೇನಿದ್ದರೂ ಹೊಸ ನೋಟದ ದೇಶಗಳ ಕಾಲ ಎಂದು ಇಂಗ್ಲೆಂಡಿನಲ್ಲಿ ನಡೆಯುವ ಜಿ- 7 ಶೃಂಗ ಸಭೆಯಲ್ಲಿ ಚೀನಾ ಹೇಳಿದೆ.

ಹಣಕಾಸಿನ ಬಲಾಢ್ಯ ದೇಶಗಳಾದ ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಫ್ರಾನ್ಸ್, ಜರ್ಮನಿ, ಇಟೆಲಿ, ಜಪಾನ್, ಇಂಗ್ಲೆಂಡ್ ಸೇರಿಕೊಂಡು ಮಾಡಿಕೊಂಡಿರುವ ಕೂಟ ಜಿ- 7. ಪ್ರತಿ ವರುಷ ಬೇರ್ಬೇರೆ ಕಡೆ ಆಹ್ವಾನಿತ ದೇಶಗಳೊಂದಿಗೆ ‌ಮತ್ತು ಯೂನಿಯನ್ ಯೂನಿಯನ್‌ನ ಸದಸ್ಯ ರಾಷ್ಟ್ರಗಳ ಜೊತೆಗೆ ಜಿ- 7 ಸಮನ್ವಯ ಸಭೆ ನಡೆಸುತ್ತದೆ.

ಅಮೆರಿಕವು ಕೋವಿಡ್ ವಯ್ರಸ್ ಬಗೆಗೆ ಚೀನಾದ ಜೊತೆ ರಾಜಕೀಯ ನಡೆಸಿದೆ. ಬುದ್ಧಿಬಲ ಈಗ ಧನ ಬಲವನ್ನು ಮೀರಿಸುತ್ತಿದೆ. ಶಕ್ತಿ ಸಮತೋಲನ ಈಗ ದಡ ಬದಲಿಸುತ್ತಲಿದೆ ಎಂದೂ ಲಂಡನ್ ಚೀನಾ ರಾಯಭಾರಿ ಕಚೇರಿ ಮೂಲಕ ಹೇಳಿಕೆ ನೀಡಲಾಗಿದೆ.