ಕಾರ್ಕಳ, ಅತ್ತೂರು: ಜಿಲ್ಲೆಯ ಅತ್ಯಂತ ಪ್ರಸಿದ್ಧ ಚರ್ಚ್ ಆಗಿರುವ ಸಂತ ಲಾರೆನ್ಸ್ ಬಸಿಲಿಕಾ ಅತ್ತೂರು ಚರ್ಚಿನಲ್ಲಿ ಗರಿಗಳ ಭಾನುವಾರದಂದು, ನೈಜ್ಯ ಶಿಲುಬೆಯ ಹಾದಿಯನ್ನು ನೆರವೇರಿಸಲಾಯಿತು. ಸಂಜೆ 3.30ಕೆ ಚರ್ಚ್ ವಠಾರದಲ್ಲಿ ಪ್ರಾರಂಭವಾದ ಶಿಲುಬೆ ಹಾದಿ ಪರಪಳೇ ಬೆಟ್ಟದವರೆಗೆ ಸಾಗಿತು. ಬಂಟ್ವಾಳ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂ| ರಾಹುಲ್ ಡಿಸೋಜಾ. ಶಿಲುಬೆಯ ಹಾದಿಯ ಮುಂದಾಳುತ್ವವನ್ನು ವಹಿಸಿ ಪ್ರವಚನವಿತ್ತರು. ತಮ್ಮ ಪ್ರವಚನದಲ್ಲಿ ನಾವು ನಮ್ಮ ಜೀವನದಲ್ಲಿ ನಮ್ಮ ನಮ್ಮ ಶಿಲುಬೆಯನ್ನು ಹೊತ್ತು ಮುಂದೆ ಸಾಗಬೇಕು ಎಂದರು. ಕಾರ್ಕಳ ವಲಯದ ಅನೇಕ ಕಲಾವಿದರು ಹಾಗೂ ವಿಶೇಷವಾಗಿ ಯೇಸುವಿನ ಪಾತ್ರವನ್ನು ನಿರ್ವಹಿಸಿದಂತಹ ದೀಪಕ್ ಡಿಮೆಲ್ಲೊ ಈ ನೈಜ್ಯ ಶಿಲುಬೆಯ ಹಾದಿಯಲ್ಲಿ ಪಾತ್ರಗಳನ್ನು ಮಾಡುವ ಮೂಲಕ ಯೇಸು ಸ್ವಾಮಿ ಶಿಲುಬೆ ಹಾದಿಯಲ್ಲಿ ಪಡೆದಂತಹ ಕಷ್ಟಗಳನ್ನು ನೈಜವಾಗಿ ತೋರ್ಪಡಿಸಿದರು.
ಬಸಿಲಿಕಾದ ರೆಕ್ಟರ್ ವಂ| ಆಲ್ಬನ್ ಡಿಸೋಜಾ, ಸಹಾಯಕ ಧರ್ಮ ಗುರುಗಳಾದ ವಂ| ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಗುರುಗಳಾದ ವಂ| ರೋಮನ್ ಮಾಸ್ಕರೆನ್ಹಸ್ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡರು.
ಶಿಲುಬೆಯ ಹಾದಿಯನ್ನು ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ, ಪಾಲನ ಮಂಡಳಿಯ ಕಾರ್ಯದರ್ಶಿಯಾದ ರೋನಾಲ್ಡ್ ನೊರೊನ್ನಾ , ವಂದೀಶ್ ಮಥಾಯಸ್, ರೋಷನ್ ಸಾಲೀಸ್ ಹಾಗೂ ಜೊಯೆಲ್ ಅತ್ತೂರು, ಪಾಲನಾ ಮಂಡಳಿ ಅತ್ತೂರ್, ಐಸಿವೈಎಂ ಸಂಘಟನೆ ಅತ್ತೂರು ಅಚ್ಚುಕಟ್ಟಾಗಿ ಆಯೋಜಿಸಿದರು.