ಕಾರ್ಕಳ, ಅತ್ತೂರು: ಜಿಲ್ಲೆಯ ಅತ್ಯಂತ ಪ್ರಸಿದ್ಧ ಚರ್ಚ್ ಆಗಿರುವ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ನಂತರ ಭಕ್ತಾದಿಗಳು ಗರಿಗಳನ್ನು ಹಿಡಿದು ಗರಿಗಳ ಮೆರವಣೆಗೆಯಲ್ಲಿ ಸಾಗಿದರು. ನಂತರ ಚರ್ಚಿನಲ್ಲಿ ದಿವ್ಯ ಬಲಿ ಪೂಜೆ ನೆರವೇರಿತು.
ಚರ್ಚಿನ ಸಹಾಯಕ ಧರ್ಮಗುರು ವಂ| ಲ್ಯಾರಿ ಪಿಂಟೊ ರವರು ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿದರು. ಹಾಗೂ ತಮ್ಮ ಪ್ರವಚನದಲ್ಲಿ ಯೇಸು ಸ್ವಾಮಿ ಸಮಾಧಾನದ ರಾಜರಾಗಿ ಈ ಭೂಲೋಕಗೋಸ್ಕರ ತಮ್ಮ ಬಲಿದಾನವನ್ನು ಶಿಲುಬೆಯ ಮೇಲೆ ಅರ್ಪಿಸಿದರು. ಹಾಗೂ ಇವತ್ತು ಏಸು ಶಾಂತಿ ಸಮಾಧಾನ ಹಾಗೂ ಅನ್ಯೋನ್ಯತೆ ಇದನ್ನು ಪಾಲಿಸಲು ಆಜ್ಞೆ ನೀಡುತ್ತಾರೆ ಎಂದು ಹೇಳಿದರು. ದಿವ್ಯ ಬಲಿ ಪೂಜೆಯಲ್ಲಿ ಗುರುಗಳಾದ ವಂ| ಆಲ್ಬನ್ ಡಿಸೋಜಾ ಹಾಗೂ ಗುರುಗಳಾದ ವಂ| ರೋಮನ್ ಮಾಸ್ಕರೇನಸ್ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡರು .