ಇದನ್ನು ನೋಡಿದರೆ ತಾಳೆ (ಪಾಮ್)ಗಳಲ್ಲಿ ಒಂದು ಜಾತಿ ಎಂದು ತೋರುತ್ತದಲ್ಲವೆ. ಆದರೆ ಇದು ತಾಳೆಯಲ್ಲ, ಜರಿ ಗಿಡ ಎಂದರೆ ಫೆರ್ನ್. 

ಸಾವಿರಾರು ಜಾತಿಯ ಜರಿ ಗಿಡಗಳಲ್ಲಿ ಮರದಂತೆ ಬೆಳೆಯುವವು ಕೆಲವು ಮಾತ್ರ. ಅವುಗಳಲ್ಲಿ ತಾಳೆಯ ಮರದಂತೆ ಬೆಳೆಯುವವ ಒಂದೆರಡು ಮಾತ್ರ.

ಎರ್ನೆಸ್ಟ್ ಹ್ಯಾಕಲ್ ಜಾತಿಯ ಜರಿ ಗಿಡಗಳು ತಾಳೆಯಂತೆ ಬೆಳೆಯುತ್ತವೆ. ಮಂಗಳೂರಿನ ಬಾವುಟ ಗುಡ್ಡೆ ಉದ್ಯಾನ ಹಾಗೂ ಇತರ ಹೂತೋಟಗಳು ಮತ್ತು ಸಿಟಿ ನಡುವೆ ಮಾದರಿಯ ಕಟ್ಟಡಗಳ ಬಳಿ ನೋಡಬಹುದು.

ಇವುಗಳಲ್ಲಿ ಬೀಜಗಳು ಇರುವುದಿಲ್ಲ. ಹೆಚ್ಚಿನವು ಹೂ ಬಿಡುವುದಿಲ್ಲ. ಒಂದೆರಡು ಹೂ ಬಿಟ್ಟರೂ ಬೀಜ ಕೊಡುವುದಿಲ್ಲ. ಇವುಗಳ ಸಂತಾನ ಬೆಳವಣಿಗೆಯು ಸ್ಪೋರ್‌ಗಳ ಮೂಲಕ ಆಗುತ್ತದೆ.

ಸ್ಪೋರ್‌ಗಳು ಏಕಾಣು ಕಣಗಳಾಗಿದ್ದು ನಮ್ಮ ಕಣ್ಣಿಗೆ ಕಾಣಿಸದೆ ದೂಳು ಆಗಿರುತ್ತದೆ. ಆದ್ದರಿಂದ ಇವನ್ನು (ಒಂದಣು) ಬೀಜಕ ಎಂದು ಹೇಳಬಹುದು.

ಉಷ್ಣ ವಲಯ ಪ್ರದೇಶದಲ್ಲಿ ತಂಪು ಇರುವ ಕಡೆಯಲ್ಲೆಲ್ಲ ಜರಿ ಗಿಡಗಳ ಬಗೆಯವನ್ನು ನೋಡಬಹುದು. ಒಂದು ಗರಿಯಂತೆ ಬೆಳೆಯುವ ಜಾತಿಯವು ಹೆಚ್ಚು.

ಮುಖ್ಯವಾಗಿ ಮಣ್ಣಿನ ಸವಕಳಿ ತಡೆಯುವಲ್ಲಿ ಮತ್ತು ನೆಲದ ನೀರ ತಂಪು ಉಳಿಸುವಲ್ಲಿ ಜರಿ ಗಿಡಗಳು ಮುಖ್ಯ ಪಾತ್ರ ವಹಿಸುತ್ತವೆ.

ತಾಳೆಯಂತೆ ಕಾಣುವ ಜರಿ ಗಿಡಗಳು ಒತ್ತೊತ್ತಾಗಿ ಎಲೆ ಚೌರಿಗಳನ್ನು ಹೊಂದಿರುತ್ತವೆ ಮತ್ತು ತೀರಾ ನಿಧಾನವಾಗಿ ಬೆಳೆಯುತ್ತವೆ. 

ಗಾಳಿಯ ಅಂಗಾರಾಮ್ಲ ತೊಡೆಯುವಲ್ಲಿ ಜರಿ ಗಿಡಗಳ ಪಾತ್ರ ಹಿರಿದಾದುದಾದ್ದರಿಂದ ಇದನ್ನು ಎಂದಿಗೂ ಕಡೆಗಣಿಸಬೇಡಿ.