ಉಡುಪಿ: ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯಾಯ ಶಾಲೆಗಳಲ್ಲಿನ 2022/2023 ರ ಸಾಲಿನ SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಉಡುಪಿ ಚರ್ಚ್‌ನ ಮಿನಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ರೋಬರ್ಟ್ ಮಿನೇಜಸ್ ರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ವೇದಿಕೆಯ ಕಾರ್ಯ ಚಟುವಟಿಕೆಯ ಬಗ್ಗೆ ಪ್ರಸ್ತಾಪಿಸಿ, ಆಗಮಿಸಿದ ಎಲ್ಲರಿಗೂ ಸ್ವಾಗತ ನೀಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ಚರ್ಚ್‌ನ ಧರ್ಮ ಗುರುಗಳು ಹಾಗೂ ವೇದಿಕೆಯ ಸಲಹೆಗಾರಾದ ವಂ.ಫಾ. ಚಾರ್ಲ್ಸ್ ಮಿನೇಜಸ್ ರವರು ಸಂದರ್ಭೋಚಿತವಾಗಿ ಶುಭ ಕೋರುತ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಮುಖ್ಯ ಅತಿಥಿ ಉಡುಪಿಯ ಹಾಶಿಮಿ ಮಸೀದಿಯ ಇಮಾಮ್ ಹಾಗೂ ಖತೀಬ್ ರವರಾದ ಜನಾಬ್ ಓಭೆದುರ್ ರೆಹೆಮಾನ್ ನದ್ವಿಯವರು ವೇದಿಕೆಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ಶುಭ ಕೋರಿದರು.
ಸುಮಾರು 60 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಯೋಗ್ಯತಾ ಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಖಜಾಂಚಿ ಸೆವ್ರಿನ್ ಡೆಸಾ ರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಾಸಿಂ ಬಾರ್ಕುರ್ ರವರು ವಂದನಾರ್ಪಣೆ ಗೈದರು. ಎಮ್. ಎಸ್. ಖಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.