ಸ್ವೀಡನ್ನಿನ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 12 ಗಂಟೆಯಲ್ಲಿಯೇ ಮ್ಯಾಗ್ದೆಲಿನಾ ಆಂಡರ್ಸನ್ ಅವರು ರಾಜೀನಾಮೆ ನೀಡಿದರು. 

ಅವರ ಸೋಶಿಯಲ್ ಡೆಮಾಕ್ರೆಟಿಕ್ ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದ ಗ್ರೀನ್ ಪಕ್ಷವು ಬೆಂಬಲ ಹಿಂತೆಗೆದುಕೊಂಡುದರಿಂದ ಅವರು ರಾಜೀನಾಮೆ ನೀಡಿದರು. ಇತರರು ಬೆಂಬಲ ನೀಡುವ ಸಾಧ್ಯತೆ ‌ಕಂಡುಬಂದಿದ್ದು, ಅವರು ಮತ್ತೊಮ್ಮೆ ಪ್ರಧಾನಿಯಾಗುವರು ಎನ್ನಲಾಗಿದೆ.