ಗೌರಿ ಲಂಕೇಶ್ ಕೊಲೆ ಆರೋಪಿ   ಎನ್. ಮೋಹನ್ ನಾಯಕ್‌ ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದುದರ ಸಿಂಧುತ್ವ ಪ್ರಶ್ನಿಸಿದ ಅರ್ಜಿ ಸಂಬಂಧ  ಸುಪ್ರೀಂ ಕೋರ್ಟ್ ಆರೋಪಿ ನಾಯಕ್‌ಗೆ ನೋಟೀಸು ನೀಡಿತು.

2023ರ ಡಿಸೆಂಬರ್ 7ರಂದು ಮೋಹನ್ ನಾಯಕ್‌ಗೆ ಜಾಮೀನು ನೀಡಲಾಗಿತ್ತು. ಕೂಡಲೆ ಗೌರಿ ತಂಗಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು. ಆ ಸಂಬಂಧ ಜನವರಿಯಲ್ಲಿ ಆರೋಪಿಗೆ ನೋಟೀಸು ನೀಡಿತ್ತು. ರಾಜ್ಯ ಸರಕಾರವೂ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಆ ಸಂಬಂಧ ಕೊಲೆ ಆರೋಪಿ ಮೋಹನ್ ನಾಯಕ್‌ಗೆ ಮತ್ತೊಂದು ನೋಟೀಸು ನೀಡಲಾಗಿದೆ.

ನ್ಯಾಯಾಧೀಶರುಗಳಾದ ವಿಕ್ರಮನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಪೀಠದೆದುರು ಪ್ರಕರಣ ವಿಚಾರಣೆಗೆ ಬಂದಿತ್ತು. ಎರಡನ್ನೂ ಒಟ್ಟಿಗೆ ಏಪ್ರಿಲ್ 9ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಪೀಠ ಸೂಚಿಸಿತು.