ಅತ್ತೂರು, ಕಾರ್ಕಳ: 20-01-2024 ಸಂಜೆ ಸಂತ ಲಾರೆನ್ಸ್ ಬಾಸಿಲಿಕಾ ಅತ್ತೂರು ಇದರ ವಾರ್ಷಿಕ ಮಹೋತ್ಸವದ ಪೂರ್ವ ತಯಾರಿಯಾಗಿ ಭ್ರಾತತ್ವದ ಪೂಜೆ ಹಾಗೂ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ನಕ್ರೆ ಚರ್ಚಿನ ಪ್ರಧಾನ ಧರ್ಮ ಗುರು ವಂ| ಲುವಿಸ್ ಡೆಸಾ ರವರು ಪೂಜೆಯನ್ನು ನೆರವೇರಿಸಿದರು.





ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಹಾಗೂ ಪ್ರಧಾನ ಧರ್ಮ ಗುರು ವಂ| ಫಾದರ್ ಆಲ್ಬನ್ ಡಿಸೋಜಾ , ಸಹಾಯಕ ಧರ್ಮಗುರು ವಂ| ಲ್ಯಾರಿ ಪಿಂಟೋ, ಆಧ್ಯಾತ್ಮಿಕ ಧರ್ಮ ಗುರು ವಂ| ರೋಮನ್ ಮಸ್ಕೇರೆನ್ಹಸ್, ವಂ| ಸುನಿಲ್ ಕಪುಜಿನ್ , ವಂ| ಮ್ಯಾಕ್ಸಿಮ್ ನಜರೆತ್ ಕಪುಜಿನ್ ಹಾಗೂ ಸಾವಿರಾರು ಭಕ್ತವೃಂದರು ಭಾಗವಹಿಸಿದರು.