ಬಂಟ್ವಾಳ: 14/01/2024 ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ದ್ವಿತೀಯ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ 7 ರಿಂದ 14 ವಯೋಮಿತಿಯ 11 ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ 4 ಚಿನ್ನ, 4 ಬೆಳ್ಳಿ ,3 ಕಂಚಿನ ಪದಕಗಳಿಸಿರುತ್ತಾರೆ .

ಶಾಲಾ ಸಂಚಾಲಕರಾದ ರೆ|ಫಾ|ಪೀಟರ್ ಡಿಸೋಜ ,ಶಾಲಾ ಮುಖ್ಯೋಪಾಧ್ಯಾಯಿನಿ ವ|ಭ ಐಡಾ ಡಿಸೋಜ ,ಕರಾಟೆ ತರಗತಿಯ ಉಸ್ತುವಾರಿಗಳಾದ ವಿನೀತ ಡಿಸಿಲ್ವ ,ಕರಾಟೆ ತರಬೇತುದಾರರಾದ ರೆನ್ಸಿ ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ ಇವರು ಉಪಸ್ಥಿತರಿದ್ದು ಅಭಿನಂದಿಸಿದರು.