ಕಾರ್ಕಳ:  ಶಿವಮೊಗ್ಗದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಎಳ್ಳಾರೆ ಮುಲ್ಕಡು ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶರಣ್ಯ   ಹೆಮ್ಮೆಯ ಸಾಧನೆ ಮಾಡಿದ್ದಾರೆ. ಏಳು ದೇಶಗಳ ಸ್ಪರ್ಧಿಗಳು ಭಾಗವಹಿಸಿದ ಈ ಚಾಂಪಿಯನ್‌ಶಿಪ್‌ನಲ್ಲಿ ಶರಣ್ಯ ಕುಮಟೆ ಹಾಗೂ ಕಟಾ ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆದು ಎರಡೂ  ವಿಭಾಗಗಳಲ್ಲೂ ಕಂಚಿನ ಪದಕ ಗೆದ್ದಿದ್ದಾರೆ.

ಶರಣ್ಯ ಎಳ್ಳಾರೆ ಸತೀಶ್ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಪುತ್ರಿಯಾಗಿದ್ದು, ಕರಾಟೆ ತರಬೇತಿಯನ್ನು ವಿಜಯಲಕ್ಷ್ಮೀ ಮತ್ತು ಸೋಮನಾಥ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.

ಇವರು ಪ್ರತಿಷ್ಠಿತ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆಮಾಡಿರುವುದು ತಮ್ಮ ಕುಟುಂಬ, ಶಾಲೆ ಹಾಗೂ ಕರಾಟೆ ತರಬೇತಿದಾರರಿಗೂ ಹೆಮ್ಮೆಯ ವಿಷಯವಾಗಿದೆ. 

ಮುಲ್ಕಾಡು ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ಬೆಳ್ಳಿರಾಯ,  ರೂಪಾಶ್ರಿ ಪ್ರಭು ,ಸೇರಿದಂತೆ ಶಿಕ್ಷಕರು  ಶುಭಾಶಯ ಕೋರಿದ್ದಾರೆ