ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಇ.ಸಿ), ವಾಮಂಜೂರು, ಮಂಗಳೂರಿನ ಎನ್.ಎಸ್.ಎಸ್ ಘಟಕವು ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ (ಎಸ್.ಎನ್.ಬಿ.ಎಸ್) ಏನ್.ಎಸ್.ಎಸ್ ಘಟಕದೊಂದಿಗೆ ಎಸ್.ಜೆ.ಇ.ಸಿ ಕ್ಯಾಂಪಸ್ನಲ್ಲಿ “ಡ್ರಗ್ ಜಾಗೃತಿ” ವಿಷಯದ ಕುರಿತು ಬೀದಿ ನಾಟಕವನ್ನು ನಡೆಸಲಾಯಿತು .
ಈ ಸಂದರ್ಭದಲ್ಲಿ ಮಂಗಳೂರಿನ ಉರ್ವಾಸ್ಟೋರ್ನ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ನ ಅಧ್ಯಕ್ಷ ಡಾ ರಾಘವೇಂದ್ರ ಹೊಳ್ಳ ಮತ್ತು ಎಸ್ಜೆಇಸಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೋ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಜೆ.ಇ.ಸಿ ಮತ್ತು ಎಸ್.ಎನ್.ಬಿ.ಎಸ್ ಎರಡೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಡಾ. ಪುರಶೋತ್ತಮ್ ಚಿಪ್ಪಾರ್, ಮತ್ತು ಡೀನ್ ಆರ್ & ಡಿ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಎನ್.ಎಸ್.ಎಸ್ ಘಟಕದ ಅಧ್ಯಾಪಕಿ ಪ್ರತಿಬಾ ಕೆ ಎನ್ ಮತ್ತು ಅನುರಾಗ್ ಮತ್ತು 30 ವಿದ್ಯಾರ್ಥಿ ಸ್ವಯಂಸೇವಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.