ಮಣಿಪುರ ರಾಜ್ಯದ ತೆಂಗನೌಪಾಲ್, ಕಾಂಗ್‌ಪೋಕ್ಸಿ, ಚುರಚುಂದಪುರಗಳು ಕುಕಿ ಜೋ ಬುಡಕಟ್ಟು ಜನರ ವಲಯವಾಗಿದ್ದು ಇಲ್ಲಿ ಸ್ವಯಂ ಆಡಳಿತಕ್ಕೆ ಅಡಿಗಲ್ಲು ಹಾಕುವುದಾಗಿ ಇವರ ಸಂಘಟನೆ ಐಟಿಎಲ್‌ಎಫ್ ತಿಳಿಸಿದೆ.

ಸರಕಾರದಿಂದ ಇನ್ನೂ ಏನೂ ನಿರೀಕ್ಷೆ ನಮಗೆ ಇಲ್ಲ. ಸರಕಾರ ನಮ್ಮನ್ನು ಗಮನಿಸದಿದ್ದರೂ ಪರವಾಗಿಲ್ಲ. ಎರಡು ವರುಷ ಕಾದು ಸ್ವಯಂ ಆಡಳಿತ ಪ್ರಕ್ರಿಯೆ ಆರಂಭಿಸುವುದಾಗಿ ಐಟಿಎಲ್ಎಫ್ ಅಧ್ಯಕ್ಷ ಮುವಾನ್ ತಾಂಬಿಂಗ್ ತಿಳಿಸಿದ್ದಾರೆ.