ನಗರದಲ್ಲಿನ ಯುನಿಸೆಕ್ಸ್ ಸಲೂನುಗಳು‌ ಅಕ್ರಮ ಚಟುವಟಿಕೆ ನಡೆಸುವುದಾಗಿ ದೂರು ಬರುತ್ತಿವೆ. ಕಠಿಣ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಪೋಲೀಸು ಕಮಿಶನರ್ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದರು.

ಮಂಗಳೂರಿನ ಯುನಿಸೆಕ್ಸ್ ಸಲೂನುಗಳು ಹೆಚ್ಚು ಅಕ್ರಮಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.