ತನ್ನ‌ ಮೂಲ ಭಾಷೆಯನ್ನು ಯಾವ ಕಾರಣಕ್ಕೂ ಬಿಟ್ಟು ಬಿಡಲಾಗದು.ಇಂದಿನ ಕೇರಳ ರಾಜ್ಯದ ನೀಲೇಶ್ವರದ ತನಕವೂ ಕನ್ನಡ ಶಾಲೆಗಳಿದ್ದು ಬಹಳಷ್ಟು ಮಂದಿ ಅಷ್ಟು ದೂರ ಹೋಗುವ ಅನಿವಾರ್ಯತೆ ಇದ್ದ ಕಾಲವೊಂದಿತ್ತು.‌ ಆದರೆ ಈಗ ಗಡಿನಾಡೆಂಬ ಹೆಸರಿನಲ್ಲಿ ಪೂರ್ತಿ ಕಾಸರಗೋಡು ಮಲೆಯಾಳ ಮಯವಾಗಿದೆ. ಇಲ್ಲಿನ ಮೂಲ ವಾಸಿಗಳೆಲ್ಲಾ ಕನ್ನಡಿಗರೇ ಆಗಿದ್ದ ಕಟು ಸತ್ಯದ ಜೊತೆಗೆ ಮಲಯಾಳಂ ಭಾಷೆಯ ಅನಿವಾರ್ಯತೆ ಅವರನ್ನು ಕಾಡುತ್ತದೆ. ‌ಅವರೀಗ ಮಲಯಾಳಂ ಭಾಷೆಗೆ ಬಲವಂತವಾಗಿ ಒಗ್ಗಿ ಹೋಗುತ್ತಿದ್ದಾರೆ. ಪರಭಾಷಾ ಒಲವು ಖಂಡಿತವಾಗಿ ಅನಪೇಕ್ಷಿತವಲ್ಲ. ಆದರೆ ಕನ್ನಡದವರಿರುವ ಕಾಸರಗೋಡು ಕನ್ನಡ ನೆಲವಾಗಿಯೇ ಮುಂದುವರಿದಾಗ ಮಾತ್ರ ಕಯ್ಯಾರ ಕಿಂಞಣ್ಣ ರೈ,ಯು ಪಿ ಕುಣಿಕುಳ್ಳಾಯ ಮಂಜೇಶ್ವರ ,ಗೋವಿಂದ ಪೈ ಮುಂತಾದ ಹಲವು ಗಡಿನಾಡ ಹೋರಾಟಗಾರರ ಪ್ರಯತ್ನಕ್ಕೆ ಸಾಫಲ್ಯ ಸಿಗುತ್ತದೆ ಎಂದು ಮೀಯಪದವಿನಲ್ಲಿ ಸೆಪ್ಟೆಂಬರ್ ಹದಿನೇಳರಂದು  ಗಡಿನಾಡು ಅಭಿವೃ ದ್ಧಿ ಪ್ರಾಧಿಕಾರ,ಆಯಾಮ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಮತ್ತು ವಿದ್ಯಾವರ್ಧಕ  ಉನ್ನತ ಶಾಲೆ ಮೀಯ ಪದವು ಸಹಯೋಗದಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಸಂಭ್ರಮ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಮಂಗಳೂರು ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿಯವರು ಮಾತನಾಡಿ ಸ್ವರಚಿತ ಗಡಿನಾಡ ಬಗೆಗಿನ‌ ಕವನ ವಾಚಿಸಿದರು.

ಮಾಜಿ ಕ.ಸಾ.ಪ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಘಾಟಿಸಿದ ಈ ಸಮಾರಂಭದಲ್ಲಿ ಡಿ.ಸಿ ಚೌಟ  ಶಾಸಕ ಕೆ ಎಂ ಅಶ್ರಫ್,  ಪ್ರೇಮಾ ತೊಟ್ಟೆತ್ತೋಡಿ , ಮತ್ತು ಸಂವಾದದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ, ಡಾ ರತ್ನಾಕರ ಮಲ್ಲ‌ಮೂಲೆ, ಟ.ಎ.ಎನ್ ಖಂಡಿಗೆ ಡಾ ಪಿ ಎನ್ ಮೂಡಿತ್ತಾಯ,ಡಾ ಮೀನಾಕ್ಷಿ ರಾಮಚಂದ್ರ ಮತ್ತು ಉಪಾನ್ಯಾಸದಲ್ಲಿ ಶಿಕಾರಿಪುರ ಕೃಷ್ಣ ಮೂರ್ತಿ ಭಾಗವಹಿಸಿದ್ದರು

ಮಾಜಿ ಎಂ ಎಲ್ ಸಿ ಕ್ಯಾ ಗಣೇಶ್ ಕಾರ್ನಿಕ್ ರವರು ಭಾಷೆಯ ಅಗತ್ಯ ಹಾಗೂ ಅಸ್ಮಿತೆಗಳ ಬಗ್ಗೆ ಮಾತನಾಡಿ ,ಅಧ್ಯಕ್ಷ ರೇವಣಕರ್ ಅವರಿಂದ ಕನ್ನಡದ ಪ್ರೇಮದ ಅಗತ್ಯದ ಕುರಿತು ಸಮಾರೋಪ ಭಾಷಣ ಸಂಪನ್ನವಾಯಿತು.

ವೇದಿಕೆಯಲ್ಲಿ ಕ.ಸಾ.ಪದ ಘಟಕ ಸದಸ್ಯ ಹಾಗೂ ಮುಖ್ಯ ಅತಿಥಿಗಳಲ್ಲೊಬ್ಬರಾದ ಎನ್ ಸುಬ್ರಾಯ ಭಟ್, ಶಾಲಾ ಮುಖ್ಯಸ್ಯ ಜಯಗೋಪಾಲ್ ತೊಟ್ಟೆತ್ತೋಡಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಧಕ ಸನ್ಮಾನ ಮತ್ತು ಪ್ರತಿಭಾವಂತ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮತ್ತು ಇತರ ಸಂಘ ಸಂಸ್ಥೆಗಳ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆ ಗೊಂಡವು. ಬೆಂಗಳೂರಿನ ರಂಗಮಂದಿರದ ತಿಲಕ್  ರಾಜ್ ಅವರು ಕೊನೆಯಲ್ಲಿ ವಂದಿಸಿದರು. ರಾಜಾರಾಮ್ ರಾವ್ ನಿರೂಪಣೆ ಮಾಡಿದ್ದರು.