ನವೆಂಬರ್ 26ರಂದು ಹಿರಿಯ ಮಹಿಳೆ ಮೇಲೆ ವಿಮಾನದಲ್ಲಿ ಉಚ್ಚೆ ಹೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ- ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಏರ್ ಇಂಡಿಯಾಗೆ ರೂ. 30 ಲಕ್ಷ ದಂಡ ವಿಧಿಸಿ, ಸದರಿ ಯಾನದ ಪೈಲಟ್ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತು ಮಾಡಿದೆ. ಅಲ್ಲದೆ ಸದರಿ ಯಾನದ ಸೇವಾ ನಿರ್ದೇಶಕರಿಗೂ ರೂ. 3 ಲಕ್ಷ ದಂಡ ವಿಧಿಸಿದೆ.
ಈ ನಡುವೆ ಬಂಧನದಲ್ಲಿರುವ ಆರೋಪಿ ಶಂಕರ್ ಮಿಶ್ರಾ ನಾನಲ್ಲ, ಆ ಮಹಿಳೆಯೇ ಉಚ್ಚೆ ಹೊಯ್ದುಕೊಂಡುದಾಗಿ ಹೇಳಿದ್ದಾನೆ ಎಂದರೆ, ಆ ಮಹಿಳೆಯು ಆತ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದಿದ್ದಾಳೆ. ಏರ್ ಇಂಡಿಯಾವು ಡಿಜಿಸಿಎಗೆ ನೀಡಿದ ಉತ್ತರದಲ್ಲಿ ಇದೂ ಇತ್ತು.
ಎಲ್ಲಕ್ಕಿಂತ ಮಿಗಿಲಾಗಿ ರಾಜಿ ಸಂಧಾನದಲ್ಲಿ ಮುಗಿಯುತ್ತದೆ ಎಂದು ಹೇಳಿದ್ದು ಆಗಿಲ್ಲ. ತುಂಬ ತಡವಾಗಿ ಜನವರಿ 4ರಲ್ಲಷ್ಟೆ ಏರ್ ಇಂಡಿಯಾ ಪೋಲೀಸರಿಗೆ ದೂರು ನೀಡಿತ್ತು.