ಗುರುವಾರ ಕತ್ತಲಾಗುವ ಹೊತ್ತಿಗೆ ಕತುವಾದ ಲಖನ್ಪುರ ಬಳಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯು ಜಮ್ಮುವಿಗೆ ಕಾಲಿಟ್ಟಿತು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟ ಮತ್ತು ಟಾರ್ಚ್ ಬೆಳಕಿನಲ್ಲಿ ಮುನ್ನಡೆದರು. ನನ್ನ ಹಿರಿಯರ ಬೇರು ಇಲ್ಲಿದೆ. ಮನೆಗೆ ಹಿಂತಿರುಗಿದ ಸಂತೋಷ ನನಗಾಗಿದೆ ಎಂದು ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.

ಕತುವಾದಲ್ಲಿ ಒಂದು ಅನಾಹುತವೂ ನಡೆಯಿತು. ಕತುವಾ ಅತ್ಯಾಚಾರ ಆರೋಪಿಯಾಗಿದ್ದ ಚೌಧರಿ ಲಾಲ್ ಸಿಂಗ್ ಯಾತ್ರೆ ಸೇರಿದರು. ಇದನ್ನು ಪ್ರತಿಭಟಿಸಿ ಜಮ್ಮು ಕಾಶ್ಮೀರದ ಕಾಂಗ್ರೆಸ್ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದರು.