ಮಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಲ್ಲಿ ಬರುವ ಹಲವು ಶೈಕ್ಷಣಿಕ ವಿಭಾಗದ ಅಲೈಡ್ ಹೆಲ್ತ್ ಕಾಲೇಜುಗಳ ಪೈಕಿ ಸಮಗ್ರ ಕರ್ನಾಟಕಕ್ಕೆ ಪ್ರಥಮವಾಗಿ ಅಲ್ಲದೆ ಇದೇ ಭಾಗದಲ್ಲಿ ರಾಷ್ಟ್ರಕ್ಕೆ 5ನೇ ಸಂಸ್ಥೆಯಾಗಿ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‍ಸ್ ಸಂಸ್ಥೆಯು ಗೌರವದಿಂದ NACC ಅಮಾನ್ಯತೆಯನ್ನು ಪಡೆಯಿತು. ನ್ಯಾಕ್ ಮಾನ್ಯತೆ ಪಡೆದಿರುವ ಕಾಲೇಜುಗಳು "ಗುಣಮಟ್ಟದ ಶಿಕ್ಷಣ ನೀಡುವ ವರ್ಗಕ್ಕೆ ಸೇರುತ್ತದೆ
ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ಸುಧಾರಿಸುವ ಸಲುವಾಗಿ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕಲಿಕೆಯ ಫಲಿತಾಂಶಗಳನ್ನು NACC ಮಾನ್ಯತೆಯು ಖಚಿತಪಡಿಸುತ್ತದೆ. ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಕಾರ್ಯಕ್ರಮವನ್ನು NACC ಅನಿರ್ವಹಿಸುತ್ತದೆ. ಮಾತ್ರವಲ್ಲದೆ, ಸರಕಾರಗಳಿಂದ ಅಥವಾಇತರ ಖಾಸಗಿ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಸಹಾಯವನ್ನು ನ್ಯಾಕ್ ಸಂಸ್ಥೆಯ ಮಾನ್ಯತೆ ಸುಗಮಗೊಳಿಸುತ್ತದೆ.
ಶಿಕ್ಷಣದ ಗುಣಮಟ್ಟ, ಸಂಶೋಧನೆ, ಅದ್ಯಾಪಕರು, ಮತ್ತಿತರ ಮೂಲ ಸೌಕರ್ಯ ಇತ್ಯಾದಿ ವಿಷಯದಲ್ಲಿ ಸಂಸ್ಥೆಯ ಗುಣಮಟ್ಟವನ್ನು NACC ಮಾನ್ಯತೆಯಿಂದ ಗುರುತಿಸಬಹುದು. NACC ಮಾನ್ಯತೆಯು ಶಿಕ್ಷಣದ ಗುಣಮಟ್ಟದ ಸುಧಾರಣೆಗಳನ್ನು ಮೇಲೇರಿಸುವುದರ ಬಗ್ಗೆ ಖಾತ್ರಿ ಪಡಿಸಲು ಗಮನವನ್ನು ಕೇಂದ್ರೀಕರಿಸುತ್ತದೆ. ವಿದ್ಯಾರ್ಥಿಗಳ ಶಿಕ್ಷಣದ ಕೌಶಲ್ಯ ಮತ್ತು ಜ್ಞಾನವನ್ನು ಬೆಳೆಸಲು ಸಾಂಪ್ರಾದಾಯಕ ವ್ಯವಸ್ಥೆಗಿಂತ ಭಿನ್ನವಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯನ್ನು ಸುಧಾರಿಸಲು NACC ಸಂಸ್ಥೆಯು ಮುಖ್ಯ ಉದ್ದೇಶಗಳನ್ನು ಹೊಂದಿರುತ್ತದೆ.
ಈ ಮಾನ್ಯತೆಯನ್ನು ಪಡೆದ ದೊಡ್ಡ ಸಾಧನೆಯ ಯಶಸ್ಸು ಸಂಸ್ಥೆಯು ಅದ್ಯಾಪಕ ಸಮುದಾಯಕ್ಕೆ ಮತ್ತು ಸಿಬ್ಬಂದಿ ವರ್ಗಕ್ಕೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಪ್ರತಿಜ್ಞಾ ಸುಹಾಸಿನಿ ಮತ್ತು IQAC ಕಾರ್ಯನಿರ್ವಾಹಕರಾದ . ಕಾರ್ತಿಕ್ ಕಾಮತ್ ಮತ್ತು ಬಳಗಕ್ಕೆ ಸಲ್ಲುತ್ತದೆ ಎಂದು ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ ಮತ್ತು ಡಾ. ಅನಿತಾ ಜಿ. ಭಟ್ ರವರು ಎಲ್ಲಾ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಸ್ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಗುರುತಿಸಿ ಈ ಕಾಲೇಜಿಗೆ ಮಾನ್ಯತೆಯನ್ನು ನೀಡಿದ NACC ಸಂಸ್ಥೆಗೂ ಈ ಕಾಲೇಜಿನಲ್ಲಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸತತವಾಗಿ ಶ್ರಮಿಸುತ್ತಿರುವ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗಕ್ಕೂ ಹಾರ್ಧಿಕ ಅಭಿನಂದನೆಯನ್ನು ಸಲ್ಲಿಸಿದ ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.