ಮುಂಬಯಿ, ಆ. 01: ಅಂತಾರಾಷ್ಟ್ರೀಯ ದೇಹದಾರ್ಡ್ಯ ಪ್ರದರ್ಶನದ ಭಾಗವಾಗಿ ಜು.27ರಂದು ಮಾಟುಂಗಾದ ಮೈಸೂರು ಅಸೋಸಿಯೇಷನ್‍ನ ಹಾಲ್‍ನಲ್ಲಿ ನಡೆದ ಮುಂಬಯಿ ಪ್ರಾದೇಶಿಕ ಮಟ್ಟದ ಮಸಲ್ ಮೇನಿಯಾ ದೇಹದಾರ್ಡ್ಯ ಸ್ಪರ್ಧೆಯಲ್ಲಿ ದಹಿಸರ್ ಪೂರ್ವದ ಅಶೋವನ ನಿವಾಸಿ ರಾಘವೇಂದ್ರ ಚಂದನ್ ಚಿನ್ನದ ಪದಕ ಗೆದ್ದುಕೊಂಡರು. ಈ ಪ್ರದರ್ಶನವನ್ನು ಪ್ರತಿ ವರ್ಷ ವಿಶ್ವದ ವಿವಿಧ ಭಾಗಗಳಲ್ಲಿ ಮತ್ತು ಭಾರತದಲ್ಲಿಯೂ ಆಯೋಜಿಸಲಾಗುತ್ತದೆ.
'ಕರ್ನಾಟಕ ಮಲ್ಲ' ದೈನಿಕದ ಮಾಜಿ ಉದ್ಯೋಗಿಯಾಗಿರುವ ಇವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯರಾಗಿರುವ ರಾಘವೇಂದ್ರ ಚಂದನ್ ಅವರು ಪ್ರಸ್ತುತ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದು, ದಹಿಸರ್ ಪೂರ್ವದ ರಮೇಶ್ ಚಂದನ್ ಮತ್ತು ಮುಕಾಂಬು ಚಂದನ್ ದಂಪತಿಯ ಪುತ್ರನಾಗಿರುವರು. ಪ್ರಾದೇಶಿಕ ಮಟ್ಟದ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ಪ್ರಸ್ತುತ ಈ ವರ್ಷದ ಡಿಸೆಂಬರ್‍ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪರ್ಧೆಗೆ ನೇರವಾಗಿ ಅರ್ಹತೆ ಪಡೆದಿರುವರು.