ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ಸಮೂದಾಯವೊಂದರ ಧುರೀಣರ ದೂರದೃಷ್ಠಿಯಿಂದ ಸ್ಥಾಪಿತ ಹಣಕಾಸು ಸಂಸ್ಥೆ ಇಡೀ ಸಮಾಜದ ಪಥಸಂಸ್ಥೆ ಆಗಿ ಇಪ್ಪತ್ತೈದು ವರ್ಷಗಳ ದೀರ್ಘಾವಧಿಯ ಮುನ್ನಡೆಯಲ್ಲಿ ಸಾಗುತ್ತಿರುದೇ ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿಯ ಹಿರಿಮೆಯಾಗಿದೆ. ಗ್ರಾಹಕರ ತೃಪ್ತಿಕರ ಸೇವೆಯೇ ನಮ್ಮ ಸಮೃದ್ಧಿಯಾಗಿದೆ. ಈ ಸೊಸೈಟಿಯ ಷೇರುದಾರರು, ಹಿತೈಷಿಗಳು, ಆಥಿರ್üಕ ಲಾಭ ಪಡೆದ ಪ್ರತೀಯೋರ್ವ ಗ್ರಾಹಕರೂ ನಮ್ಮ ಯಶಸ್ಸಿನ ರೂವಾರಿಗಳಾಗಿದ್ದಾರೆ.  ಉದ್ಯಮಶೀಲರು ಷೇರುಮಾರುಕಟ್ಟೆ, ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೊಂದಿಕೊಳ್ಳುತ್ತಿದ್ದರೆ ಜನಸಾಮಾನ್ಯರು ಸಹಕಾರಿ ಸೊಸೈಟಿಗಳನ್ನೇ ಅವಲಂಬಿಸಿರುತ್ತಾರೆ. ಆದುದರಿಂದ ಕ್ರೆಡಿಟ್ ಸೊಸೈಟಿಗಳು ಗರಿಷ್ಠ ಮಟ್ಟದ ಸೇವೆ ನೀಡುವಲ್ಲಿ ಗ್ರಾಹಕರ ಪಾಲಿಗೆ ವಿಶ್ವಾಸನೀಯವಾಗಿವೆ. ಗ್ರಾಹಕರ ತೃಪ್ತಿಕರ ಸೇವೆಗೆ ನಮ್ಮ ಉದ್ದೇಶವಾಗಿದ್ದು, ಸಮೂದಾಯದ ಸೊಸೈಟಿ ಮುಖೇನ ಸಮಾಜದ ಋಣ ಪೂರೈಸಿದ ಅಭಿಮಾನ ನಮಗಿದೆ ಎಂದು ಕರ್ನಾಟಕ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷ, ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಸ್ಥಾಪಕ ಕಾರ್ಯಾಧ್ಯಕ್ಷ ಡಾ| ಕೆ.ಸಿ ನಾರಾಯಣ ಗೌಡ ತಿಳಿಸಿದರು.

ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿ ಸತ್ಯನಾರಾಯಣ ಗೋಯೆಂಕಾ ಭವನದ ಸಭಾಗೃಹದಲ್ಲಿ ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ನಡೆಸಿದ ತನ್ನ 25ನೇ ವಾರ್ಷಿಕ ಮಹಾಸಭೆಗೆ ಚಾಲನೆಯನ್ನೀಡಿ ಡಾ| ನಾರಾಯಣ ಗೌಡ ಮಾತನಾಡಿದರು. 

ಬೃಹನ್ಮುಂಬಯಿಯಲ್ಲಿ ಸೇವಾನಿರತ ಒಕ್ಕಲಿಗ ಸಮುದಾಯದ ಸಂಚಾಲಕತ್ವದ ಸೊಸೈಟಿ ಕಾರ್ಯಾಧ್ಯಕ್ಷ ರಂಗಪ್ಪ ಸಿ.ಗೌಡ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಸೊಸೈಟಿ ಉಪ ಕಾರ್ಯಾಧ್ಯಕ್ಷ ಎ.ಕೆಂಪೇಗೌಡ (ರಾಮಣ್ಣ), ಕಾರ್ಯದರ್ಶಿ ಕೆ.ರಾಜೇಗೌಡ (ಅಧ್ಯಕ್ಷರು, ಒಕ್ಕಲಿಗರ ಸಂಘ ಮಹಾರಾಷ್ಟ್ರ), ಕೋಶಾಧಿಕಾರಿ ಮುತ್ತೇ ಎಸ್.ಗೌಡ, ಅತಿಥಿsಗಳಾಗಿ ಶೈಲ ನಿಲಂಕರಿ, ಮಲ್ಲಿಕಾರ್ಜುನ ಸ್ವಾಮೀಜಿ, ಗಂಗಾಧರ್ ಎನ್.ಗೌಡ, ರಾಕೇಶ್ ಸಿಂಗ್ ವೇದಿಕೆಯನ್ನಲಂಕರಿಸಿದ್ದರು. 

ಕ್ರೆಡಿಟ್ ಸೊಸೈಟಿಯ ನಿರ್ದೇಶಕರುಗಳಾದ ದೇವಕಿ ಎನ್.ಗೌಡ, ಸುನಂದಾ ಆರ್.ಗೌಡ, ಶಕುಂತಲಾ ಮುತ್ತೇ ಗೌಡ ಸುನೀಲ್ ಕೆ.ಅವ್ಹಾಡ್, ರಾಹುಲ್ ಯು.ಲಗಾಡೆ, ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಜಿತೇಂದ್ರ ಜೆ.ಗೌಡ, ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.

ನಮ್ಮವರಲ್ಲಿನ ಧುರೀಣರ ಆರ್ಥಿಕ ವ್ಯವಹಾರದ ದೂರದೃಷ್ಠಿತ್ವದ ಫಲವೇ ಸೊಸೈಟಿಯು 25 ಫಲಪ್ರದ ಸೇವೆಯಲ್ಲಿ ತೊಡಗಿಸುವಂತಾಯಿತು. ಸೊಸೈಟಿಯ ಸರ್ವೋನ್ನತಿಗೆ ಶ್ರಮಿಸಿದ ಸರ್ವರ ಅನುಪಮ ಸೇವೆ ಮನವರಿಸುವೆ ಎಂದು ಕಾರ್ಯಾಧ್ಯಕ್ಷ ರಂಗಪ್ಪ ಗೌಡ ತಿಳಿಸಿದರು.  

ಕೆ.ರಾಜೇಗೌಡ ಮಾತನಾಡಿ ಸೊಸೈಟಿಯ ಹೊಸ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸೊಸೈಟಿಯ ಹಣಕಾಸು ಬಗ್ಗೆ ಸೂಚನೆ ಮತ್ತು ಸಲಹೆಗಳನ್ನು ನೀಡಿದರು.

ಸೊಸೈಟಿಯ ಹಿರಿಯ ಪ್ರಬಂಧಕ ಪರ್ಶುರಾಮ್ ದೌಂಡ್ ಅತಿಥಿüಗಳನ್ನು ಪರಿಚಯಿಸಿ, ಸಭಾಕಲಾಪ ನಿರ್ವಹಿಸಿ ಗತ ಸಾಲಿನ ವಾರ್ಷಿಕ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತರು. 

ಈ ಸಂದರ್ಭದಲ್ಲಿ ಸೊಸೈಟಿಯ ರಜತ ಮಹೋತ್ಸವದ ಅಂಗವಾಗಿ ಕೇಕ್ ಕತ್ತರಿಸಿ ರಜತೋತ್ಸವವನ್ನು ಸಂಭ್ರಮಿಸಿದರು. ಸೊಸೈಟಿಯ ಮಾಜಿ ನಿರ್ದೇಶಕರು, ಷೇರುದಾರರು, ಗ್ರಾಹಕರು, ಹಿತೈಷಿಗಳು, ಉನ್ನತಾಧಿಕಾರಿಗಳು ಹಾಜರಿದ್ದು,  ಗಂಗಾಧರ್ ಎನ್.ಗೌಡ, ಶೈಲ ನಿಲಂಕರಿ, ರಾಕೇಶ್ ಸಿಂಗ್ ಮತ್ತಿತರರು ಮಾತನಾಡಿ ಸೊಸೈಟಿಯ ಮುನ್ನಡೆಗೆ ಸಲಹಿದರು.

ಲಾಲ್‍ಬಾಗ್‍ಕಾ ರಾಜಾ ಮಹಾಗಣಪತಿ, ಧನಲಕ್ಷ್ಮೀ, ಜಯಲಕ್ಷ್ಮೀ, ಶ್ರೀ ಗಂಗಾಧರೆಶ್ವರಸ್ವಾಮಿ, ಒಕ್ಕಲಿಗರ ಧೀಶಕ್ತಿ ದೈವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾಗುರುಗಳಿಗೆ ಆದಿಯಲ್ಲಿ ಆರತಿ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡÀಲಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‍ಮಾರ್ಗ್, ಕೆ.ಎಂ ರಾಮು ಸ್ವಾಮಿ ಚೆಂಬೂರು ಪೂಜೆ  ನೆರವೇರಿಸಿ ಅನುಗ್ರಹಿಸಿದರು. 

ಸೊಸೈಟಿಯ ಶಾಖಾ ಉಸ್ತುವಾರಿ ಲತಾ ಧನ್‍ರಾಜ್ ಗೌಡ, ಉನ್ನತಾಧಿಕಾರಿಗಳಾದ ಶಿಲ್ಪಾ ಸಂತೋಷ್ ಮಾಂಡವ್ಕರ್, ಪ್ರದೀಪ್‍ಕುಮಾರ್ ಆರ್.ಗೌಡ, ಶ್ರೀಕಾಂತ್ ಡಿ.ರಾವ್, ವಸೂಲಾತಿ ಅಧಿಕಾರಿ ಸುನೀಲ್ ಆರ್.ಮೋಕಾಶಿ ಇನ್ನಿತರ ಸಿಬ್ಬಂದಿಗಳು, ದೈನಂದಿನ ಹಣಸಂಗ್ರಹಾ ಪ್ರತಿನಿಧಿಗಳು ಉಪಸ್ಥಿತರಿದ್ದು ಕೆ.ರಾಜೇಗೌಡ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.