ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಇನ್ನರ್ ವೀಲ್ ಕ್ಲಬ್ ಮತ್ತು ಪವರ್ ಫ್ರೆಂಡ್ಸ್ ಬೆದ್ರದವರ ಆಶ್ರಯದಲ್ಲಿ ಅಕ್ಟೋಬರ್ 6 ಆದಿತ್ಯವಾರದಂದು ಪುತ್ತಿಗೆ ಪಂಚಾಯತ್ ಮೈದಾನದಲ್ಲಿ ಮಂಗಳೂರಿನ ಜುಲೇಖ ಏನಪಾಯ ಇನ್ಸ್ಟಿಟ್ಯೂಟ್ ನವರ ಸಹಯೋಗದಲ್ಲಿ ಮಹಿಳೆಯರಿಗಾಗಿ ಉಚಿತ ಗರ್ಭ ಕಂಠ ಮತ್ತು ಸ್ತನ ತಪಾಸಣೆ ಹಾಗೂ ಸಾರ್ವಜನಿಕರಿಗೆ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಮ್ಯಾಮೋ ಗ್ರಾಂ ಪರೀಕ್ಷೆ, ರಕ್ತದ ಸಕ್ಕರೆ ಪರೀಕ್ಷೆ, ಪ್ಯಾಪ್ಸ್ ಸ್ಕಿಯರ್, ರಕ್ತದೊತ್ತಡ ಪರೀಕ್ಷೆ ಇತ್ಯಾದಿಗಳಿಗೂ ಅವಕಾಶಗಳಿದ್ದು ಸಾರ್ವಜನಿಕರು ಸಂಬಂಧಪಟ್ಟ ಮಾಹಿತಿಗಾಗಿ 9845479785/ 9611436514 ರಲ್ಲಿ ಮೊದಲಾಗಿ ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಕೇಳಿಕೊಂಡಿರುತ್ತಾರೆ.