ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಹೃದಯ ಸಂಬಂಧಿ ಚಿಕಿತ್ಸೆಯ ಕ್ಯಾಥ್ ಲ್ಯಾಬ್ ಡಿಸೆಂಬರ್ 17 ರಂದು ಉದ್ಘಾಟನೆಗೊಂಡಿತು. ಲ್ಯಾಬ್ ಅನ್ನು ದೀಪ ಬೆಳಗಿ ಉದ್ಘಾಟಿಸಿದ ನಿಟ್ಟೆ ಡೀಮ್ಡ್  ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ವಿನಯ್ ಹೆಗ್ಡೆ ಮಾತನಾಡಿ ಹೃದಯ ಸಂಬಂಧಿ ಬೈಪಾಸ್ ಸರ್ಜರಿ ನಡೆದರೂ ಕಳೆದ 20 ವರ್ಷಗಳಿಂದ ಆರೋಗ್ಯವಾಗಿದ್ದೇನೆ ಇಂತಹ ಉತ್ತಮ ಚಿಕಿತ್ಸೆಗಳು ಸ್ಥಳೀಯ ಜನರಿಗೂ ದೊರಕಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಕಾಶ ದೊರಕಲಿ. ಆಸ್ಪತ್ರೆಯಲ್ಲಿ ನಷ್ಟ ಇದ್ದರೂ ಕೂಡ ಜನರ ಅಪೇಕ್ಷೆ ಹಾಗೂ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಮೂಲಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿವೆ ಎಂದರು. 

ಎ ಜೆ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎ ಜೆ ಶೆಟ್ಟಿ ಮಾತನಾಡಿ ಸಮಾಜಕ್ಕಾಗಿ ಉತ್ತಮ ಸೌಲಭ್ಯಗಳನ್ನು ಒದಗಿಸುವುದಕ್ಕೆ ಪರಿಶ್ರಮಿಸುತ್ತಿರುವ ಆಳ್ವಾಸ್  ನ ಪ್ರಯತ್ನವನ್ನು ಶ್ಲಾಘಿಸಿದರು. ಸರಕಾರವು ಬಡವರ ಆರೋಗ್ಯಕ್ಕಾಗಿ ಉತ್ತಮ ಅವಕಾಶಗಳನ್ನು ಮಾಡಿಕೊಡಬೇಕು ಎಂದು ಅಪೇಕ್ಷಿಸಿದರು.

ಕಣಚೂರು ಆಸ್ಪತ್ರೆ ಮತ್ತು ವಿದ್ಯಾಸಂಸ್ಥೆಗಳ ಮುಖ್ಯಸ್ಥ ಹಾಜಿ ಯು ಕೆ ಮೋನು ಪ್ರತಿಯೊಂದು ಕ್ಷೇತ್ರಗಳಲ್ಲಿ ಆಳ್ವಾಸ್ನ ವಿಶೇಷತೆಯನ್ನು ಮೆಚ್ಚಿಕೊಂಡು ವಿರಾಸಪ್ ನಂತಹ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವುದರ ಮೂಲಕವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ತಾಲೂಕು ಮಟ್ಟದ ಗ್ರಾಮೀಣ ಜನರಿಗೆ ಒದಗಿಸುತ್ತಿರುವುದಕ್ಕೆ ಮೆಚ್ಚಿಕೊಂಡರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮೋಹನ್ ಆಳ್ವ ಮಾತನಾಡಿ ಊರಿನ ಅಭಿವೃದ್ಧಿಗಾಗಿ, ಜನರ ಸುಖ ಕಷ್ಟಗಳಿಗೆ ಸ್ಪಂದಿಸುತ್ತಾ ಖಾಸಗಿ ಕ್ಷೇತ್ರವಾದರೂ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹೋರಾಡುತ್ತಿದ್ದೇನೆ. ಭಗವಂತನ ಆಶೀರ್ವಾದದಿಂದ ಮೌಲ್ಯಕ್ಕೆ ಮೊದಲ ಪ್ರಶಸ್ತಿಯನ್ನು ನೀಡಿ ಸಾಧಕರ ಕೃಪೆಯಿಂದ ಮುಂದುವರೆಯುತ್ತಿದ್ದೇನೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಆಳ್ವಾಸ್ನ ಡೀನ್ ಡಾ. ಮಹಾಬಲ ಶೆಟ್ಟಿ, ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಡಾಕ್ಟರ್ ಹರೀಶ್ ನಾಯಕ್ ಉಪಸ್ಥಿತರಿದ್ದರು.

ಆಳ್ವಾಸ್ ಹೆಲ್ಪ್ ಸೆಂಟರ್ ನ ಮುಖ್ಯಸ್ಥ ಡಾಕ್ಟರ್ ವಿನಯ ಆಳ್ವ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಡಿಯಾಕ್ ಸೆಂಟರ್ನ ಮುಖ್ಯಸ್ಥ ಡಾಕ್ಟರ್ ದಿತೇಶ್ ಎಂ ವಂದಿಸಿದರು.