ಅಲ್ಲಿಪಾದೆ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಂತ ಜೋನ್ ಹಿರಿಯ ಪ್ರಾಥಮಿಕ ಶಾಲೆ, ಇದರ ವಾರ್ಷಿಕ ಕ್ರೀಡಾಕೂಟವು ಇತ್ತಿಚೆಗೆ ಅತ್ಯಂತ ಉತ್ಸಾಹ ಹಾಗೂ ಸಡಗರದಿಂದ ಆಯೋಜಿಸಲಾಯಿತು.

ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. "ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತಮ್ಮ ಜೀವನದಲ್ಲಿ ಕ್ರೀಡಾತ್ಮಭಾವವನ್ನು ಬೆಳೆಸಿಕೊಂಡು ಶ್ರೇಷ್ಠತೆಗೆ ಪ್ರಯತ್ನಿಸಬೇಕು" ಎಂದು ಪರ್ಲಾ ಸೆಂಟ್ ಜೇಕಬ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೈ.ಎಫ್. ಕಾಳವಾಡ ಹೇಳಿದರು. 

ಅವರು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂದನೀಯ ಫಾದರ್ ರೋಬರ್ಟ್ ಡಿ’ಸೋಜ ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಸ್ತಿನ, ಪರಿಶ್ರಮದ ಮತ್ತು ಆರೋಗ್ಯಕರ ಸ್ಪರ್ಧೆಯ ಮಹತ್ವವನ್ನು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳು ಟಾಗೋರ್, ನೆಹರು, ಗಾಂಧಿ ಮತ್ತು ಸುಭಾಸ್ ಎಂಬ ನಾಲ್ಕು ಗುಂಪುಗಳನ್ನು ಪ್ರತಿನಿಧಿಸಿ ಅಚ್ಚುಕಟ್ಟಾದ ಕವಾಯತು ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳ ಶಿಸ್ತಿನ ಪ್ರದರ್ಶನ ಎಲ್ಲರ ಮನಗೆದ್ದಿತು.

ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ವಿನೋದ, ಸೆಂಟ್ ಜೋನ್ ಪ್ರೌಢಶಾಲೆಯ ಸಂಚಾಲಕಿ ಸಿಸ್ಟರ್ ನರ್ಸೀಸಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲವಿನಾ ವೇಗಸ್, ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ನವೀನ್ ಮೊರಾಸ್, ವಿನ್ಸೆಂಟ್ ಪಿಂಟೊ, ಕಿರಣ್ ನೊರಾನ್ನಾ, ರೆನ್ನೀ‌ ಫೆರ್ನಾಂಡಿಸ್ ಹಾಗೂ SDMC ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಂತ ಜೋನ್ ಶಾಲಾ ಮುಖ್ಯ ಶಿಕ್ಷಕಿ ಮೋಂತಿ ಕ್ರಿಸ್ತಿನ್ ಸ್ವಾಗತಿಸಿ, ಸಹ ಶಿಕ್ಷಕಿ ಬಬಿತಾ ಧನ್ಯವಾದ ಅರ್ಪಿಸಿದರು. 

ಸಹ ಶಿಕ್ಷಕಿ ಸೌಮ್ಯ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದ ಉಸ್ತುವಾರಿ ಸಹಶಿಕ್ಷಕಿ ವಿನಯಾ ಮತ್ತು ವಿಜೇತ್ ಪಿಂಟೊ ಕಾರ್ಯಕ್ರಮ ಯಶಸ್ವಿಯಾಗಿ ಸಂಯೋಜಿಸಿದರು.