ಮೂಡುಬಿದಿರೆ ತಾಲೂಕಿನ ಗಾಂಧಿನಗರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜುಲೈ 2 ರಂದು ಪರಿಸರ ಸಂರಕ್ಷಣೆಯ ಅಗತ್ಯ, ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಲೇವಾರಿಯಲ್ಲಿ ಪ್ಲಾಸ್ಟಿಕ್ ಪ್ರತ್ಯೇಕಿಸಿ ಮರು ಬಳಕೆಗೇ ನೀಡ ಬೇಕಾದ ಅನಿವಾರ್ಯತೆ, ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ದೊರಕುವ ಎಲ್ಲಾ ಸೌಲಭ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಾಯಿತು. 

ವಿದ್ಯಾರ್ಥಿಗಳು ತಾವು ಕಲಿತ ಅಂಶಗಳನ್ನು ತಿಳಿಸಿದಾಗ ವಿವಿಧ ಉದಾಹರಣೆಗಳೊಂದಿಗೆ ಪೂರಕ ಮಾಹಿತಿಯನ್ನು ನೀಡುವ ಮೂಲಕ ಅವರ ತಿಳುವಳಿಕೆಯನ್ನು ಹೆಚ್ಚಿಸಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ,  ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಮುಖ್ಯ ಶಿಕ್ಷಕಿ ಕಸ್ತೂರಿ ಸ್ವಾಗತಿಸಿದರು. ಶಿಕ್ಷಕಿ ಸುಪ್ರೀತಾ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕಿ ಭವ್ಯ ವಂದಿಸಿದರು.