ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ 3 ನೇ ವಾರ್ಡ್ ಬನ್ನಡ್ಕತಾಯಿ ದೈವಸ್ಥಾನದ ಹಿಂಭಾಗದ ಸುಮಾರು 300 ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಡಲಾಯಿತು.
ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ 2023-24 ನೇ ಸಾಲಿನ ಅನುದಾನದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತಾರೆ. ಹಿಂದೆ ಬಂದ ಅನುದಾನದಲ್ಲಿ ಕೇವಲ 100 ಮೀಟರ್ ಮಾತ್ರ ಮಾಡಲು ಸಾಧ್ಯವಾಗಿತ್ತು. ಅದನ್ನು ಈ ಬಾರಿಯ ನೂತನ ಅನುದಾನದಲ್ಲಿ ಪೂರೈಸಲು ಸಾಧ್ಯವಾಯಿತು ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ಬೆಂಬಲ ನೀಡಿದ ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ರ ಹಾಗೂ ಸಹಕರಿಸಿದ ಎಲ್ಲ ಸದಸ್ಯರಿಗೂ ಬೋಳ ವಿಶ್ವನಾಥ ಕಾಮತ್ ಧನ್ಯವಾದ ಸಲ್ಲಿಸಿದರು.