ಮೂಡುಬಿದರೆ: ಸ್ಥಳೀಯ ತೋಟಗಾರಿಕೆ ಇಲಾಖೆ ವತಿಯಿಂದ ರೈತ ಜನ್ಯ ಸಂಘದ ಸಹಯೋಗದಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆ ಅಂಗವಾಗಿ ಕಾಳುಮೆಣಸು ಬೆಳೆಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇದರ ಪ್ರಕಾರ ಅರ್ಜಿ ಹಾಕಿದ ಹೆಚ್ಚಿನ ಎಲ್ಲಾ ಕಾಳು ಮೆಣಸು ಬೆಳೆಗಾರರಿಗೆ ಸುಮಾರು 5,400 ಕಾಳು ಮೆಣಸು ಗಿಡಗಳನ್ನು ಎರಡನೆಯ ಹಂತದಲ್ಲಿ ಜೂನ್ 15ರಂದು ಶನಿವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗಿಡಗಳನ್ನು ವಿತರಿಸಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಯುಗೇಂದ್ರ ಕೆ ಅವರು , ಇದು ವರೆಗೆ ಮೂಡುಬಿದಿರೆ ತಾಲ್ಲೂಕಿನ ರೈತರಿಗೆ ಸುಮಾರು 30,000 ಗಿಡಗಳನ್ನು ವಿತರಿಸಿದ್ದು ರೈತರು ಆ ಉತ್ತಮ ಗಿಡಗಳ ಬಹಳ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿರುವುದರಿಂದ ಸಂತೋಷಭರಿತರಾಗಿದ್ದಾರೆ ಎಂದು ತಿಳಿಸಿದರು. ಅದೇ ರೀತಿ ಇಲಾಖೆಯಲ್ಲಿ ಇನ್ನೂ ಸಾಕಷ್ಟು ಗಿಡಗಳಿದ್ದು ಮುಂದಿನ ದಿನಗಳಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಆಸಕ್ತ ಕೃಷಿಕರು ತಮ್ಮ ಸ್ವಂತ ಪಹಣಿ ಪತ್ರ, ಆಧಾರ್ ಕಾರ್ಡ್ , ಭಾವಚಿತ್ರ, ಉದ್ಯೋಗ ಖಾತರಿ ಕಾರ್ಡು ,ರೇ ಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಅವರು ವಿನಂತಿಸಿದ್ದಾರೆ.
ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ.