ಮೂಡುಬಿದಿರೆ:  ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಜೂ 21, 2024 ರಂದು ವಿಶ್ವ ಯೋಗ ದಿನಾಚರಣೆಯನ್ನು ಯೋಗಾ ಸನಾ ಮಾಡುದರ ಮೂಲಕ ಆಚರಿಸಲಾಯಿತು. 

ಪರಮಪೂಜ್ಯ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಪ್ರಾರಂಭದಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕೊಡುಗೆಗಳಲ್ಲಿ ಯೋಗ ಹಾಗೂ ಧ್ಯಾನವು  ಶ್ರೇಷ್ಠ  ಜೀವನ ಕಲೆಯಾಗಿದ್ದು ಅದಿಯೋಗಿ ಭಗವಾನ್ ಆಧಿ ನಾಥರು ಸಹಸ್ರ ಸಹಸ್ರ ವರ್ಷಗಳ ಪೂರ್ವದಲ್ಲೆ ಭೋದಿಸಿದ್ದರು. ಮಾನವ ಮನಸು ಹಾಗೂ ದೇಹ ಅರೋಗ್ಯಕ್ಕೆ ಯೋಗ ಪೂರಕ ದಿನಾ ಬೆಳಿಗ್ಗೆ ಅನುಲೋಮ ವಿಲೋಮ ಮಾಡುವ ವಿದ್ಯಾರ್ಥಿ ಉತ್ಸಾಹದಿಂದ ಕಲಿಕೆಯಲ್ಲಿ ಮುಂದಿರಲು ಸಾಧ್ಯ ಎಂದು ತಿಳಿಸಿ ಯೋಗದ ವಿವಿಧ ಆಸನಗಳ ಪರಿಚಯವನ್ನು ಮಕ್ಕಳಿಗೆ ವಿಶ್ವಯೋಗ ದಿನವಾದ ಜೂನ್ 21, 2024 ರಂದು ಶ್ರೀ ಜೈನ ಮಠದ ಬಳಿ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಬೆಳಿಗ್ಗೆ 9.30 ರಿಂದ 10.15ರ ವರೆಗೆ ತಿಳಿಸಿಕೊಟ್ಟರು. ಸರಳ ಯೋಗದ ಆಸನಗಳಾದ ಪದ್ಮಾಸನ ವೀರಾಸನಾ ಶಲಾಭಾಸನಾ, ಪರ್ವತಾಸನಾ, ವೃಕ್ಷಾಸನ ಸರ್ವಾoಗಸನಾ ಯೋಗ ಅಸನಗಳ ರಾಜ ಶಿರ್ಷಾಸನಾ ಕೂಡಾ ಮಾಡಿ ಅದರ ಪ್ರಯೋಜನ ತಿಳಿಸಿದರು.  ದ್ವಿತೀಯ ಪಿಯು ವಿದ್ಯಾರ್ಥಿ ಸ್ವಾತಿ ಹಾಗೂ ಮನಸ್ವಿನಿ ಕೆಲವು ಆಸನಗಳನ್ನು ತಿಳಿಸಿ ಕೊಟ್ಟರು. 

ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಯೋಗದ ಆಸನಗಳನ್ನು ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿ ಉಪನ್ಯಾಸಕೆ ಸುಜಾತಾ ವಂದನಾರ್ಪಣೆ ಸಲ್ಲಿಸಿದರು. ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.