ರಾಯಚೂರು ಜಿಲ್ಲೆ ಮಸ್ಕಿ ಬಳಿಯ ದಿಗ್ಗನಾಯಕನಬಾವಿ ಗ್ರಾಮದ ಯಾಮನಗೌಡ ಎಂಬವರ ಹೊಲದಲ್ಲಿ ಚಾಲುಕ್ಯ ಸಾಮ್ರಾಟ 6ನೇ ವಿಕ್ರಮಾದಿತ್ಯನ ಕಾಲದ ಶಾಸನವೊಂದು ಪತ್ತೆಯಾಗಿದೆ.
ಡಾ. ಚನ್ನಬಸಪ್ಪ ಮಲ್ಕುಂದಿ ಈ 25 ಸಾಲಿನ ಶಾಸನ ಅಧ್ಯಯನ ಮಾಡಿ ಇದು ದಾನ ಶಾಸನವಾಗಿದೆ. ಕಾಲ ಡಿಸೆಂಬರ್ 26, 1106 ಇರಬೇಕು ಎಂದಿದ್ದಾರೆ. ಆಗ ಇಲ್ಲಿ ಕಾಟಿಂಗಲ್ ಎಂದರೆ ಈಗಿನ ಕಾಟಗಲ್‌ನಲ್ಲಿ ಕಾಳಿಮರಸ ಎಂಬ ಸಾಮಂತನಿದ್ದುದು ಈ ಶಾಸನದಿಂದ ತಿಳಿದುಬಂದಿದೆ.