ಬಾಂಗ್ಲಾದೇಶದ ಡಾಕಾ ನಗರದ ರೂಪಗಂಜ್‌ನ ಹಾಶೆಮ್ ಫುಡ್ ಆಂಡ್ ಬೆವರೇಜಸ್ ಫ್ಯಾಕ್ಟರಿಗೆ ಬಿದ್ದ ಬೆಂಕಿ ಗುರುವಾರದಿಂದ ಶುಕ್ರವಾರದತನಕ 25 ಗಂಟೆಗಳ ಕಾಲ ಉರಿದು 52 ಜನರನ್ನು ಜೀವಂತ ಬೇಯಿಸಿ ಕೊಂದಿದೆ.
ಕರಕಲಾದ ಶವಗಳನ್ನು ಸಾಗಿಸುವಾಗ ಜನರು ರಸ್ತೆ ತಡೆ ನಡೆಸಿದ್ದರಿಂದ ಸ್ವಲ್ಪ ಹೊತ್ತು ಪೋಲೀಸರು ಪರಿಸ್ಥಿತಿ ತಹಬಂದಿಗೆ ತರಲು ಒದ್ದಾಡಬೇಕಾಯಿತು.
ಅಗ್ನಿಶಾಮಕ ದಳದವರು 27 ಜನರನ್ನು ರಕ್ಷಿಸಿದ್ದಾರೆ. ಬೆಂಕಿ ಆರನೇ ಮಹಡಿಗೂ ಹಬ್ಬಿದಾಗ ಮೇಲಿನಿಂದ ಹಾರಿ ತೀವ್ರ ಗಾಯಗೊಂಡವರ ಸಂಖ್ಯೆ 30ರಷ್ಟು ಎಂದು ಡಾಕಾ ಪೋಲೀಸು ಮುಖ್ಯಸ್ಥರು ತಿಳಿಸಿದ್ದಾರೆ.