ಮಂಗಳೂರು: 2025ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.91% ಕ್ಕಿಂತ ಹೆಚ್ಚಿನ ಅಂಕ ಪಡೆದ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‍ಸೈಟ್ https://ksgeanews.blogspot.com ಮುಖಾಂತರ ಅರ್ಜಿ ಅಪ್‍ಲೋಡ್ ಮಾಡಬಹುದು. 

ಆನ್‍ಲೈನ್ ಅರ್ಜಿ ಸಲ್ಲಿಸಲು ವಿಧಾನ ಹಾಗೂ ಅಗತ್ಯ ಮಾಹಿತಿಗೆ ಕೆಎಸ್‍ಜಿಇಎ ನ್ಯೂಸ್ ಯೂಟ್ಯೂಬ್  (KSGEA NEWS YOUTUBE) ಚಾನೆಲ್‍ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ  ಜೂನ್ 5.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:- ವಿದ್ಯಾರ್ಥಿಯು 2025ರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ನೌಕರರಾಗಿರಬೇಕು.ನಿಗಮಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾನಿಲಯ ಖಾಸಗಿ ಮತ್ತು  ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ. 

ಆನ್‍ಲೈನ್ ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು: ಇಲಾಖೆಯ ಸೇವಾ ದೃಢೀಕರಣ ಪತ್ರ, ವಿದ್ಯಾರ್ಥಿಯ ಪಾಸ್‍ಪೋರ್ಟ್ ಭಾವಚಿತ್ರ ಮತ್ತು ದೃಢೀಕೃತ ಅಂಕಪಟ್ಟಿ, ಸಂಘದ ಜಿಲ್ಲಾ/ತಾಲ್ಲೂಕು/ಯೋಜನಾ ಶಾಖೆ ಅಧ್ಯಕ್ಷರು/ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ (KSGEA NEWSBlog ನಲ್ಲಿ ಪಿ.ಡಿ.ಎಫ್ ಫೈಲ್ ಲಭ್ಯವಿದೆ). ಮೇಲ್ಕಂಡ ಲಗತ್ತುಗಳನ್ನು ನಿಗದಿಸಿ JPG Format ನಲ್ಲಿ (IMB ಮೀರದಂತೆ) ಅಪ್‍ಲೋಡ್ ಮಾಡಬೇಕು.

ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್ ಸ್ವೀಕೃತಿ ರವಾನೆಯಾಗಿದೆ.ಶೇಕಡಾವಾರು' ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಲತೇಶ್ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.