ಮಂಗಳೂರು,ಜು. 2: 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ/ಪದವಿ/ಸ್ನಾತಕೋತ್ತರ ಪದವಿ/ಮೆಡಿಕಲ್/ಇಂಜಿನಿಯರಿಂಗ್ ಇತರೆ ಕೋರ್ಸ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

ಪಿ.ಯು.ಸಿ, 3 ವರ್ಷ ಪಾಲಿಟೆಕ್ನಿಕ್ ಡಿಪ್ಲೋಮಾರೂ 20000,  ಬಿ.ಎ/ಬಿ.ಕಾಂ/ಬಿ.ಎಸ್ಸಿ/ ಬಿ.ಎಡ್/ಬಿ.ಪಿ.ಎಡ್ ರೂ.25,000, ಸ್ನಾತ್ತಕೋತರ ಪದವಿಗಳಿಗೆ ರೂ. 30000, ಅಗ್ರಿಕಲ್ಚರ್/ಇಂಜಿನಿಯರಿಂಗ್/ವೆಟರ್ನರಿ/ ವೈದ್ಯಕೀಯ ಕೋರ್ಸ್‍ಗಳಿಗೆ ರೂ. 35000 ಪ್ರೋತಾಹಧನ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ https://swd.karnataka.gov.in/ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿಯನ್ನು ಸಲ್ಲಿಸಿದ ನಂತರ ಸಂಬಂಧಪಟ್ಟ ಪ್ರಾಂಶುಪಾಲರಿಂದ ದೃಢೀಕರಿಸಿ, ಒಂದು ವಾರದೊಳಗಾಗಿ ಅರ್ಜಿಯ ಪ್ರತಿಯನ್ನು, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಆಯಾ ತಾಲೂಕುಗಳಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ (ಗ್ರೇಡ್-1&2), ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ  ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಉಪ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದು ಎಂದು  ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.