ಮಂಗಳೂರು: ನೀಟ್ 2025 ನಡೆಸಿರುವವೈದ್ಯಕೀಯ ಪದವಿ ಪರೀಕ್ಷೆಗಳಿಗೆ ನಡೆಸಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಶಕ್ತಿ ಪ.ಪೂ ಕಾಲೇಜಿನ 8 ವಿದ್ಯಾರ್ಥಿಗಳುಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ಶಕ್ತಿ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ಅನುರಾಗ್ ಆರ್ ನಾೈಕ್- 550 ಅಂಕ (99.4359343 ಪರ್ಸೆಂಟೈಲ್)ನೊಂದಿಗೆ ರಾಷ್ಟ್ರಮಟ್ಟದಲ್ಲಿ 12265 ರ್ಯಾಂಕ್ ಪಡೆದಿರುತ್ತಾರೆ. ಸ್ವಪ್ನ– 525, ಅಶ್ವತ್ ಅಜಿತ್ ಪೈ – 510, ಮೌನ ಜಿ – 510, ಅಭಿಜ್ಞ– 504, ವೃಷ್ಟಿ ಶೆಟ್ಟಿ– 479 ಹಾಗೂ ಸಂಜನರಾವ್– 477 ಅಂಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ನಮ್ಮ ಸಂಸ್ಥೆಯ ಒಟ್ಟು 49 ವಿದ್ಯಾರ್ಥಿಗಳು ನೀಟ್ 2025 ಪರೀಕ್ಷೆಯನ್ನು ಬರೆದ್ದಿದ್ದು ಇದರಲ್ಲಿ 7 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ಪ್ರತಿ7 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ವೈದ್ಯಕೀಯ ವಿಭಾಗಕ್ಕೆಆಯ್ಕೆಯಾಗುತ್ತಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕರು ಮತ್ತು ಆಡಳಿತಾಧಿಕಾರಿಗಳಾದ ಡಾ.ಕೆ.ಸಿ.ನಾೈಕ್ರವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷವ್ಯಕ್ತಪಡಿಸಿದರು. ಈ ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತ ಸೂರಜ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.