ಮಂಗಳೂರು: ಜನವರಿ ನಾಲ್ಕರಂದು ಮಂಗಳೂರಿನಲ್ಲಿ ‌ನಡೆಯುವ‌ ಪ್ರಥಮ ಕೊಂಕಣಿ ವಿದ್ಯಾರ್ಥಿ ‌ಸಾಹಿತ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಫಾದರ್ ಪ್ರವೀಣ್ ಮಾರ್ಟಿಸ್ ಮತ್ತು ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಅಧ್ಯಕ್ಷರಾದ ಕೆ ವಸಂತ ರಾವ್ ಜಂಟಿಯಾಗಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಕುಲಪತಿಗಳಾದ ಫಾದರ್;ಭಾಷೆಯ ರಾಯಭಾರಿಗಳು ವಿಧ್ಯಾರ್ಥಿಗಳು ಎಂದು ನೆನಪಿಡಬೇಕು. ಮನೆಯಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ  ಯುವಜನರು ಕೊಂಕಣಿ ಮಾತನಾಡಿದರೆ ಭಾಷೆಯ ಆಯುಷ್ಯ ಇನ್ನೊಂದು ನೂರು ವರುಷ ವಿಸ್ತರಿಸಿದಂತೆ ಆಗುತ್ತದೆ ಎಂದರು.

ಕೆಬಿಎಮ್‌ಕೆ ಅಧ್ಯಕ್ಷರಾದ ಕೆ ವಸಂತ ರಾವ್ ಶುಭಹಾರೈಸಿ ಮಾತನಾಡಿದರು ಮತ್ತು ಐವತ್ತು ವರ್ಷದ ಚರಿತ್ರೆಯ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ನೂರೈವತ್ತು ವರ್ಷಗಳ ಹಳೆಯ ಅಲೋಶಿಯಸ್ ಸಂಸ್ಥೆಯ ಜೊತೆಯಲ್ಲಿ ಸೇರಿಕೊಂಡು ಕೊಂಕಣಿ ಯುವಜನರಿಗೆ ಸಾಹಿತ್ಯ ಸಮ್ಮೇಳನ ಮಾಡುವುದು ದಾಖಲೆ ಆಗಿದೆ ಎಂದರು .

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕೊಂಕಣಿ ಕಾರ್ಯಕ್ರಮ ಸಂಯೋಜಕರಾದ ಡಾ. ಸೆವ್ರಿನ್ ಪಿಂಟೊ, ಉಪಸ್ಥಿತರಿದ್ದರು.

ಮೊದಲಿಗೆ ಕೆಬಿಎಮ್‌ಕೆ ಕಾರ್ಯದರ್ಶಿ ಹಾಗೂ ಈ ಕಾರ್ಯಕ್ರಮ ಸಂಚಾಲಕ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಮುಖ್ಯಸ್ಥರಾದ ಪ್ಲೊರಾ ಕಾಸ್ತೆಲಿನೊ ವಂದಿಸಿದರು.

ಅಲೋಶಿಯಸ್ ಕಾಲೇಜಿನ  ಕೊಂಕಣಿ ವಿದ್ಯಾರ್ಥಿಗಳ ಸಂಘದ  ಕಾರ್ಯದರ್ಶಿಗಳಾದ ರಾಹುಲ್ ಮೆಂಡೊನ್ಸಾ, ರಸ್ಸೆಲ್ ಡಿಮೆಲ್ಲೊ‌ ಮತ್ತು ವಾರ್ಷಿಕ ಸಂಚಿಕೆಯ ಸಂಪಾದಕರಾದ ಅನ್ವಿತಾ ಡಿಕೂನಾ, ಫರ್ಜೊಲ್, ಕೆಬಿಎಮ್‌ಕೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಡೊಲ್ಫ ಡಿಸೋಜ ಹಾಜರಿದ್ದರು. ಕೊಂಕಣಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ‌ಮಿಶೆಲ್ ಫೆರ್ನಾಂಡಿಸ್  ನಿರೂಪಿಸಿದರು.