ಮಂಗಳೂರು: ದಿನಾಂಕ 23 ಶನಿವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಕಲಾ ಮಂದಿರ ( ಪುರಭವನ) ದ ಪ್ರೊ ಅಮೃತ ಸೋಮೇಶ್ವರ ನಗರದ ಮಿಜಾರು ಆನಂದ ಆಳ್ವ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ 26 ನೇ ಯ ಸಾಹಿತ್ಯ ಸಮ್ಮೇಳನವು ವಿದ್ಯುಕ್ತವಾಗಿ ಚಾಲನೆ ಗೊಂಡಿತು.
ತದಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯು ಸಾಹಿತಿ ಹಾಗೂ ಆಕಾಶವಾಣಿಯ ನಿವೃತ್ತ ಉದ್ಘೋಶಕ ಮುದ್ದು ಮೂಡು ಬೆಳ್ಳೆಯವರ ಘನ ಅಧ್ಯಕ್ಷತೆಯಲ್ಲಿ ಸಂಪನ್ನವಾಯಿತು
ನಂತರ ಮುಂದುವರಿದ ಕವಿಗೋಷ್ಠಿ ಪೈಕಿ ಕನ್ನಡ ಭಾಷೆಯಲ್ಲಿ ಶ್ರೀಮತಿ ಅಕ್ಷಯಾ ಆರ್ ಶೆಟ್ಟಿ ,ಶ್ರೀ ಎಂಡಿ ಮಂಚಿ, ತುಳು ಭಾಷೆಯಲ್ಲಿ ರಘು ಇಡ್ಕಿದು, ಗೀತಾ ಲಕ್ಷ್ಮೀಶ್, ಬ್ಯಾರಿ ಭಾಷೆಯಲ್ಲಿ ಆದಂ ಹೆಂತಾರ್ ಕಡಬ,ಕೊಂಕಣಿಯಲ್ಲಿ ರೇಮಂಡ್ ತಾಕೊಡೆ, ಅರೆ ಭಾಷೆಯಲ್ಲಿ ಕರುಣಾಕರ ನಿಡಿಂಜಿ ಅವರು ಕ್ರಮವಾಗಿ ಸ್ವರಚಿತ ಕವನಗಳನ್ನು ವಾಚಿಸಿದರು. ಕೇಂದ್ರ ಕನ್ನಡ ಸಾಹಿತ್ಯವೇದಿಕೆ ದ.ಕ ,ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಸಮಿತಿ ಅಧ್ಯಕ್ಷ ,ಬರಹಗಾರ ಡಾ ಸುರೇಶ ನೆಗಳಗುಳಿಯವರು ಹವ್ಯಕ ಭಾಷೆಯ ಗಜಲ್ ವಾಚಿಸಿದರು
ಅಧ್ಯಕ್ಷ ಭಾಷಣ ಮಾತನಾಡುತ್ತಾ ಮುದ್ದು ಮೂಡುಬೆಳ್ಳೆಯವರು ಕಾವ್ಯದ ಸಾಮರ್ಥ್ಯ ಸಾರ ಮತ್ತು ಬರೆಯುವ ಓದುವ ವೈಖರಿ ಬಗೆಗೆ ವಿಶ್ಲೇಷಣೆ ಮಾಡಿ ಸ್ವರಚಿತ ಕವನವನ್ನು ವಾಚಿಸಿದರು. ಉಪಸ್ಥಿತರಿದ್ದ ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆಯವರು ಬಹು ಭಾಷಾ ಸಾಹಿತ್ಯದ ಊರಾದ ದಕ್ಷಿಣ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸ್ತುತ ಎಂದರು.
ರಾಜ್ಯ ಕ.ಸಾ.ಪ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ರವರು ಆಶಯನುಡಿ ಮತ್ತು ಸುರತ್ಕಲ್ ಕ.ಸಾ.ಪ ಹೋಬಳಿ ಅಧ್ಯಕ್ಷೆ ಕೆ.ಆರ್. ಗುಣವತಿ ಯವರು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯಾಧ್ಯಕ್ಷ ಡಾ ಮಹೇಶ ಜೋಶಿ, ಜಿಲ್ಲಾಧ್ಯಕ್ಷ ಡಾ . ಶ್ರೀನಾಥ್, ಗತ ವರ್ಷದ ಸಮ್ಮೇಳನಾಧ್ಯಕ್ಷ ಡಾ ಪ್ರಭಾಕರ ಜೋಶಿ ಸಹಿತ ಹಲವಾರು ಗಣ್ಯರು ಮತ್ತು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.