ಮಂಗಳೂರು: ಸುನ್ನಿ ಮುಸ್ಲಿಂ ಮತ್ತು ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಎಸ್ಎಸ್ಎಫ್‌ನವರು ಮಂಗಳೂರು ಗಡಿಯಾರ ಗೋಪುರದ ಬಳಿ ನಾಗರಿಕರ ಕೊಲೆಗಳನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಿದರು.

ನಮ್ಮನ್ನು ಯಾವ ರಾಜಕೀಯ ಗುಂಪು ಕೂಡ ದುರುಪಯೋಗ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅಬ್ದುಲ್‌ ಜಲೀಲ್ ಕೊಲೆ ಮಾತ್ರವಲ್ಲ ಎಲ್ಲ ಕೊಲೆಗಳನ್ನು ನಾವು ಖಂಡಿಸುತ್ತೇವೆ. ಈಗಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಲೆಗಳನ್ನು ಪ್ರಾಯೋಜಿಸುವಂತೆ ಕಾಣಿಸುತ್ತದೆ. ಸಾರ್ವಜನಿಕರ, ನಾಗರಿಕರ ರಕ್ಷಣೆ ಮಾಡಲಾಗದ ಈ ಸರಕಾರಕ್ಕೆ ಆಳುವ ನೈತಿಕತೆ ಇಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು.