ಮಂಗಳೂರು: ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರರಾದ ಅಬ್ದುಲ್ ಸಲೀಂ ಇವರ ನೇತೃತ್ವದಲ್ಲಿ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಕೂಡಲೇ ಮುಗಿಸುವಂತೆ ಸ್ಮಾರ್ಟ್ ಸಿಟಿಯ ಮ್ಯಾನೇಜರ್ ಅರುಣ್ ಪ್ರಭಾಜಿಯವರಿಗೆ ಒತ್ತಾಯಿಸಲಾಯಿತು. ಕಾಮಗಾರಿ ನಡೆಯುವ ಸ್ಥಳವನ್ನು ವೀಕ್ಷಿಸಿದ ಕಾಂಗ್ರೆಸ್ ನಾಯಕರು ಇನ್ನೂ 30 ದಿನಗಳ ಒಳಗಡೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಿವುದಾಗಿ ಸ್ಮಾರ್ಟ್ ಸಿಟಿಯ ಮ್ಯಾನೇಜರ್ ಅರುಣ್ ಪ್ರಭಾರವರು ನಮ್ಮ ನಿಯೋಗಕ್ಕೆ ಭರವಸೆಯನ್ನು ನೀಡಿದ್ದಾರೆ.

ಕಾಮಗಾರಿ ಅಮೆಗತಿಯಲ್ಲಿ ನಡೆಯುತ್ತಿದ್ದು, ಮಳೆಯ ಕಾರಣದಿಂದ ಕಾಮಗಾರಿ ಕುಂಠಿತಗೊಂಡಿದೆ ಎಂದು ಹೇಳುವ ಉತ್ತರ ಸಮಂಜಸವಲ್ಲ ಕೂಡಲೇ ಕಾಮಗಾರಿ ಮುಗಿಸಬೇಕು ಇಲ್ಲದೇ ಇದ್ದಲ್ಲಿ ಪಂಪ್ವೆಲ್ ಮತ್ತು ಕಂಕನಾಡಿಯಲ್ಲಿ ಉದ್ದೇಶಿಸಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಯಾವುದೇ ಕಾರಣಕ್ಕೂ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್ನ ಸಮಸ್ಯೆ ಪರಿಹಾರವಾಗದೇ ವಾಹನ ಸಂಚಾರಕ್ಕೆ ಅನೂಕೂಲ ಮಾಡಿ ಕೊಡದೇ ಪಂಪವೆಲ್ ಮತ್ತು ಕಂಕನಾಡಿ ಕಾಮಗಾರಿಗಳನ್ನು ಮುಂದುರಿಸಬಾರದೆಂದು ಐವನ್ ಡಿʼಸೋಜಾ ಇವರು ಪೋಲಿಸ್ ಕಮಿಷನರ್ ಮತ್ತು ಮಂಗಳೂರು ಸಂಚಾರ ವಿಭಾಗದ ಡಿ.ಸಿ.ಪಿ. ಕೆ. ರವಿಶಂಕರ್ ರವರನ್ನು ಒತ್ತಾಯಿಸಿದ್ದಾರೆ.
ಕಾಮಾಗಾರಿಗಳನ್ನು ಅಮೆಗತಿಯಲ್ಲಿ ನಡೆಸುತ್ತಿದ್ದು ಜನಸಾಮಾನ್ಯರಿಗೆ ತೊಂದರೆಗಳನ್ನು ನೀಡುತ್ತಿರುವ ಕೆಲಸ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸಂಸದರಾದ ಕ್ಯಾಪ್ಟನ್ ಬ್ರಿಜೇಷ್ ಚೌಟ ಮತ್ತು ಶಾಸಕರಾದ ವೇದವ್ಯಾಸ ಕಾಮತ್ ರವರು ಮಾಡುತ್ತಾ ಬಂದಿರುತ್ತಾರೆ. ಯಾವುದೇ ತೀವ್ರವಾದ ಕ್ರಮತೆಗೆದುಕೊಳ್ಳದೇ ಇಂದು ಮಳೆಗಾಲದಲ್ಲಿ ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಹಾಗೂ ಚರಂಡಿಗಳಲ್ಲಿ ನೀರು ನಿಂತು ಡೆಂಗ್ಯೂ ಮಲೇರಿಯಾದಂತಹ ಕಾಯಿಲೆಯಿಂದ ಬಳಲುವಂತಾಗಿದೆ. ಇದಕ್ಕೆ ಕಾರಣ ಈ ಕಾಮಗಾರಿ ಕುಂಠಿತಗೊಂಡಿರುವುದಾಗಿದೆ. ಎಂದು ಐವನ್ ಡಿʼಸೋಜಾರವರು ಈ ಸಂದರ್ಭದಲ್ಲಿ ಪ್ರತಿಭಟನೆಕಾರರನ್ನು ಉದ್ದೇಶಿಸಿ, ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಸಲೀಂ ಇವರು ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು, ಈ ಭಾಗದ ರಸ್ತೆಯು ನೀರು ಸಂಗ್ರಹಣೆ ಮಾಡಲು ಮಾಡಿದ ಟ್ಯಾಂಕ್ನಂತೆ ಇದ್ದು ಯಾವುದೇ ಕಾರಣಕ್ಕೂ ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ಉಪಯೋಗಲಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಜೆ. ಅಬ್ದುಲ್ ಸಲೀಂ, ಕಾಂಗ್ರೆಸ್ ನಾಯಕರು ಆಲ್ಸ್ಟನ್ ಡಿ’ ಕುನ್ಹಾ, ಸತೀಶ್ ಪೆಂಗಲ್, ಚಂದ್ರಕಲಾ ಜೋಗಿ, ಸುಧಾಕರ್, ಶಾಲಿನಿ, ನವಾಜ್ ಜೆಪ್ಪು, ಮನೀಶ್ ಬೋಳಾರ್, ನೆಲ್ಸನ್, ಹೈದರ್ ಬೋಳಾರ್, ವಿಕಾಸ್ ಶಟ್ಟಿ, ನೀತು ಡಿಸೋಜಾ, ಹಬೀಬುಲ್ಲಾ ಕಣ್ಣೂರು, ಸ್ಥಳೀಯರಾದ ಬಾಬು ಸುವರ್ಣ, ಲತೀಫ್ ಪಾಟ್ನಾ, ಜೆ. ಇಬ್ರಾಹಿಂ, ಸಪ್ನ ಜೆಪ್ಪು ಪಾಟ್ನಾ, ಅಬ್ದುಲ್ ವಹಾಬ್, ಅಜ್ಮಲ್ ಕಾಂಗ್ರೆಸ್ ನಾಯಕರಾದ ಅಲ್ಟೈನ್ ಡಿʼಕುನ್ಹ, ಹಬಿಬುಲ್ಲ, ಸುಧಾಕರ್ ಜೆ. , ನವಾಜ್ ಜೆಪ್ಪು, ಸತೀಶ್ ಪೆಂಗಲ್, ಮುಂತಾದವರು ಉಪಸ್ಥಿತರಿದ್ದರು.