ಮಂಗಳೂರು: ನಗರದ ಪಣಂಬೂರಿನ ಕೆಐಓಸಿಎಲ್ ಉದ್ಯೋಗಿಯಾಗಿರುವ ಸುರೇಶ ಪಿ.ಟಿ. ಇವರು ಇತ್ತೀಚೆಗೆ ಮಣಿಪಾಲ್ ಮ್ಯಾರಾಥಾನ್ ಮತ್ತು ಪೊನ್ನಂಪೇಟೆ ರೋಡ್ ರನ್ ಚಾಂಪಿಯನ್ ಶಿಪ್ ನಲ್ಲಿ ಬಹುಮಾನವಾಗಿ ಪಡೆದ ಮೊತ್ತವನ್ನು ಬಂದರ್ ಬಸ್ತಿ ಗಾರ್ಡನ್ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸುವ ಮೂಲಕ ಸದ್ವಿನಿಯೋಗ ಮಾಡಿರುತ್ತಾರೆ. ಇವರ ದಾನಪರತೆಯನ್ನು ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕವೃಂದ ಶ್ಲಾಘಿಸಿ ಅಭಿನಂದಿಸಿದೆ.
ಈ ಶೈಕ್ಷಣಿಕ ವರ್ಷಾರಂಭದಲ್ಲಿ ಸುರೇಶ ಪಿ.ಟಿ. ಇವರು ಹಲವು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದ ಪ್ರಶಸ್ತಿ ಮೊತ್ತವನ್ನು ಚಿಕ್ಕಮಗಳೂರು ಜಿಲ್ಲೆಯ ಪಟ್ಟಣಗೆರೆ ಗ್ರಾಮದ ಸರಕಾರಿ ಶಾಲೆಯ 250 ಮಕ್ಕಳಿಗೆ ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸ್ಮರಣೀಯವನ್ನಾಗಿ ಮಾಡಿರುತ್ತಾರೆ.