ಮಂಗಳೂರು ಕಾರು ಮತ್ತು ರಿಕ್ಷಾ ಚಾಲಕರ ಸಂಘಟನೆಗೆ ಐವತ್ತು ವರ್ಷ ಪೂರ್ಣಗೊಂಡಿದ್ದು ಐವತ್ತು ವರ್ಷದಲ್ಲಿ  ಸಲ್ಲಿಸಿದ ಸೇವೆ ಮತ್ತು ಅದರ ನಡೆದು ಬಂದ ದಾರಿಯ ಬಗ್ಗೆ ಚರ್ಚಿಸಲು ಮಂಗಳೂರು ಆಟೋ ರಿಕ್ಷಾ ಚಾಲಕರ ಆಡಳಿತ  ಮಂಡಳಿಯು  ಸುವರ್ಣ ಮಹೋತ್ಸವ ಈ ಸಂದರ್ಭದಲ್ಲಿ ಐವತ್ತು ವರ್ಷದ  ಲೋಗೋವನ್ನು ಬಿಡುಗಡೆ ಮಾಡಲಾಯಿತು. 

ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಶಾಸಕರು ಹಾಗೂ ರಿಕ್ಷಾ ಮತ್ತು ಕಾರು ಚಾಲಕರ ಸಂಘದ ಅದ್ಯಕ್ಷರಾದ ಶ್ರೀ ಐವನ್ ಡಿʼಸೋಜಾರವರು ಸಹಕಾರಿ ಸಂಘಟನೆಗಳು ಜನರ ಬಾಳಿಗೆ ಬೆಳಕಾಗಿ ಮೂಡಿ ಬಂದಿದೆ. ರಿಕ್ಷಾ ಚಾಲಕರಿಗೆ ಮತ್ತು ಕಾರು ಚಾಲಕರಿಗೆ ಸಾಲ ಕೊಡುವಂತಹ ಸಂದರ್ಭದಲ್ಲಿ  ರಾಷ್ಟ್ರೀಕೃತ ಬಾಂಕುಗಳು ಹಿಂದೇಟು ಹಾಕುತಿದ್ದಂತಹ ಸಂದರ್ಭದಲ್ಲಿ ಅವರ ಏಳಿಗೆಗಾಗಿ ಹಾಗೂ ಸೆಕೆಂಡ್ಹ್ಯಾಂಡ್ ವಾಹನಗಳನ್ನು ಖರೀದಿಸಲು ಸಾಲವನ್ನು ನೀಡಲು ನಿರಾಕರಿಸುತ್ತಿದ್ದಂತಹ ಸಂದರ್ಭದಲ್ಲಿ ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಲು ಅಂದಿನ ಧರ್ಮಗುರುಗಳಾದ ಪ್ರೆಡ್ ವಿ ಪಿರೇರಾ ಇವರು ಕಾರ್ಮಿಕ ಸಂಘವನ್ನು ಸೇರಿ ಈ ಒಂದು ಸಂಘವನ್ನು ಹುಟ್ಟುಹಾಕಿದರು. ಈವತ್ತು ಐವತ್ತು ವರ್ಷಗಳು ಸಂದಿವೆ. ಶೇಕಡಾ 60% ಕಿಂತಲೂ ಹೆಚ್ಚು ರಿಕ್ಷಾ ಚಾಲಕರು ಈ ಸಹಕಾರಿ ಸಂಘದ ಮೂಲಕ ಇಂದಿಗೂ ಅನೇಕ ರೀತಿಯ ಸಾಲವನ್ನು ಕೊಟ್ಟು ರಿಕ್ಷಾ ಚಾಲಕರ ಏಳಿಗೆಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರಿಕ್ಷಾ ಚಾಲಕರ ಅಭಿವೃದ್ದಿಗಾಗಿ ಕೆಲಸಮಾಡಿಕೊಂಡು ಬಂದಿರುವ ಐವನ್ ಡಿಸೋಜಾರವರು ಶುಭ ಹಾರೈಸಿದರು. ಐವತ್ತು ವರ್ಷಗಳ ಕಾರ್ಯಕ್ರಮವು ನವಂಬರ್ ತಿಂಗಳಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪೂರ್ವತಯಾರಿಯಾಗಿ ರಿಕ್ಷಾಚಾಲಕರ ಹಾಗೂ ಕಾರುಚಾಲಕರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಾಡು ಮಾಡುವ  ಮೂಲಕ ಐವತ್ತನೆ ವರ್ಷದ ಸಂಭ್ರಮದಿಂದ ಅಚರಣೆ  ಮಾಡಲು ಸಮಿತಿಗಳನ್ನು ರಚಿಸಲಾಯಿತು. ಸಮಿತಿಯ ಸದಸ್ಯರುಗಳಾಗಿ ವಸಂತ ಶೆಟ್ಟಿಯವರು ಕ್ರೀಡಾ ವಿಭಾಗಕ್ಕೆ ಮತ್ತು ಇದರ ಪ್ರಚಾರ ಮತ್ತು ಮೆಡಿಕಲ್ ಕ್ಯಾಂಪೂಗಳ ಜವಬ್ದಾರಿಯನ್ನು  ಶೇಖರ್ ದೇರಲಕಟ್ಟೆ ಅದೇ ರೀತಿ ಕಾರ್ಯಕ್ರಮದ ಸಂಘಟಕರು ಮತ್ತು ಮುಖಂಡತ್ವವನ್ನು ಮತ್ತು ಸ್ಮರಣಾ ಸಂಚಿಕೆಯನ್ನು ನಿರ್ದೇಶಕರಾದ ಶವಾದ್ ಗೂನಡ್ಕ ಇವರಿಗೆ ನೀಡಲಾಯಿತು ಅದೇ ರೀತಿ ಮಕ್ಕಳಿಗೆ ಅನೇಕ ರೀತಿ ವಿನೋದಾವಳಿಗಳ ಜೊತೆಗೆ ಡ್ಯಾನ್ಸ್ ಸ್ಪರ್ಧೆಗಳನ್ನು ಏರ್ಪಡಿಸಲು ಬಬಿತಾ ಡಿಸೋಜಾ ವಿದ್ಯಾ ತೋರಸ್ ಇವರುಗಳಿಗೆ ಜವಬ್ದಾರಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರುಗಳು ತಮ್ಮ ತಮ್ಮ ಅಭಿಪ್ರಾಯವನ್ನು ನೀಡಿದರು. ಉಪಾಧ್ಯಕ್ಷರಾದ ಸಿರಿಲ್ ಡಿʼಸೋಜಾ ಸ್ವಾಗತಿಸಿ ಕಾರ್ಯಕ್ರ ನಿರೂಪಿಸಿದರು. ಈ ಸಮಾರಂಭದಲ್ಲಿ  ಐವನ್ ಡಿಸೋಜಾ (ಅಧ್ಯಕ್ಷರು ) ಸಿರಿಲ್ ಡಿಸೋಜಾ ( ಉಪಾಧ್ಯಕ್ಷರು ) ಡೈರೆಕ್ಟರ್ ಗಳಾದ  ಅನಿಲ್ ಡಿಸೋಜಾ ಒಲ್ವಿನ್ ಪಿಂಟೋ  ಕೆ ಭಾಸ್ಕರ್ ರಾವ್ ಬಬಿತ ಡಿಸೋಜಾ  ವಿದ್ಯಾ ವಿನಯ ತೋರಸ್ ವಸಂತ ಸೀತಾರಾಮ ಶೆಟ್ಟಿ  ಎಂ ಚಂದ್ರಶೇಖರ್ ರಾಜೇಶ್  ಶೌವಾದ್ ಗುನಡ್ಕ ಪ್ರಮೋದ್ ವಾಸ್ ( ಮುಖ್ಯ ಕಾರ್ಯನಿರ್ವಾಹಣಅಧಿಕಾರಿ)  ದಿನೇಶ್ ಕೆ ( ಸಂಘದ ಸಲಹೆಗರಾರು )ಸಿಬ್ಬಂದಿಗಳಾದ ನಿಶಿತಾ  ಅಶ್ವಿತಾ ಭರತ್ ಕುಮಾರ್ ಉಪಸ್ಥಿತರಿದ್ದರು.