ಕುಡ್ತೇರಿ ಮಹಾಮಾಯಾ ಕೆರೆಯಲ್ಲಿ ಎರಡು ಬಿಳಿ ಬಾತುಕೋಳಿಗಳು ಇವೆ. ಆ ಕುಡಲದ ಕುಡ್ತೇರಿ ಮಹಾಮಾಯಾ ಆಲಯದ ಕೆರೆಯ ಬಾತುಕೋಳಿಗಳನ್ನು ಒಂದು ಕೊಳಬೆಳ್ಳಕ್ಕಿ ನಿನ್ನೆ ಭೇಟಿ ಮಾಡಿತು.

ಕೊಳಬೆಳ್ಳಕ್ಕಿಯ ರೆಕ್ಕೆಯ ಮೇಲ್ಭಾಗ ಬೂದು ಬಣ್ಣ ಆಗಿರುವುದರಿಂದ ಅವು ಕೂತಾಗ ಬಿಳಿ ಕಾಣಿಸದು. ಹಾರುವಾಗ ಬೆಳ್ಳಗೆ ಆಗುತ್ತವೆ. ಬಾತುಕೋಳಿಗಳು ಬಹುತೇಕ ನೀರಲ್ಲೇ ಇರುತ್ತವೆ ಹಾಗಾಗಿ (ನೀರಕ್ಕಿ), ಆದರೆ ಕೊಳಬೆಳ್ಳಕ್ಕಿಗಳು ಕೊಳದ ಅಂಚಿನಲ್ಲಿ ಇರುತ್ತವೆ. ಅವು ನೀರ ಹಕ್ಕಿಗಳಲ್ಲ.

ಬಾತು, ಹಂಸ ಮೊದಲಾದ ನೀರು ಹಕ್ಕಿಗಳ ಗರಿಗಳು ಎಣ್ಣೆಯ ಅಂಶದ ರಕ್ಷಣೆ ಹೊಂದಿರುತ್ತವೆ. ಆದರೆ ನೀರು ಕಾಗೆಗಳು ಅದನ್ನು ಹೊಂದಿಲ್ಲ. ಹಾಗಾಗಿ ನೀರು ಕಾಗೆಗಳು ನೀರಲ್ಲಿ ಮುಳುಗಿದ ಬಳಿಕ ಮೇಲೆ ಬಂದು ಬಿಸಿಲು ಕಾಯಿಸುತ್ತವೆ. ಮೊದಲು ವಿಮಾನ ಏರುವ ಹಾಗೆ ನಿಂತು ಬಳಿಕ ಮುದುರಿ ಕೂರುತ್ತವೆ.

ಮಹಾಮಾಯಾ ಕೆರೆಯಲ್ಲಿ ನಿನ್ನೆ ಕೂತು ಬಿಸಿಲು ಕಾಯಿಸುತ್ತಿದ್ದ ಒಂದು ನೀರು ಕಾಗೆಯೂ ಕಂಡು ಬಂತು. ನೀರು ಕಾಗೆಗಳಲ್ಲಿ ಉದ್ದ ಕುತ್ತಿಗೆಯವನ್ನು ಹಾವು ಕಾಗೆ ಎನ್ನುತ್ತಾರೆ. ಇನ್ನೂ ಹಲವು ಜಾತಿಗಳು ಈ ಮೂರೂ ಹಕ್ಕಿ ಜಾತಿಗಳಲ್ಲಿ ಇವೆ.

Article By

- Perooru Jaru