ಲೋರೆಟ್ಟೊ: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರದಂದು ಲೋರೆಟ್ಟೊ ಮಾತಾ  ಚರ್ಚ್ ನಿಂದ ಆವಲ್  ಮಿನೇಜಸ್ ರವರ ಗುಡ್ಡದಲ್ಲಿ ನಿರ್ಮಿಸಿದ ಶಿಲುಬೆಯ ಗುಡ್ಡದ ವರೆಗೆ ಶಿಲುಬೆಯ ಹಾದಿಯಲ್ಲಿ  ನೂರಾರು  ಭಕ್ತಾದಿಗಳು  ಪಾಲ್ಗೊಂಡರು.  

ಚರ್ಚ್ ಧರ್ಮ ಗುರುಗಳಾದ ವಂ|  ಫ್ರಾನ್ಸಿಸ್ ಕ್ರಾಸ್ತಾ , ಪ್ರಧಾನ ಧರ್ಮ ಗುರುಗಳಾಗಿ ಮಂಗಳೂರು ಧರ್ಮ ಪ್ರಾಂತ್ಯದ  ಧರ್ಮ್ಯಾಧ್ಯಕ್ಷರ ಕಾರ್ಯದರ್ಶಿ ವಂ|  ಸ್ವಾಾಮಿ ತ್ರಿಶನ್  ವಿಶೇಷ ಪ್ರಾರ್ಥನೆಯನ್ನು ಅರ್ಪಿಸಿದರು.  ಲೋರೆಟ್ಟೊ ಅಂಗ್ಲ ಮಾಧ್ಯಮ  ಶಾಲಾ ಮುಖ್ಯೋಪಾಧ್ಯಯರಾದ ವಂ| ಜೆಸನ್ ಮೊನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು.