ಲೊರೆಟ್ಟೊ: ಸಿ.ಬಿ.ಎ.ಇ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತುಂಬೆ ಕೃಷಿ ತೋಟಗಾರಿಕಾ ಫಾರ್ಮ್‌ಗೆ ಭೇಟಿ ನೀಡಿದರು. ಈ ಭೇಟಿಯು ವಿದ್ಯಾರ್ಥಿಗಳಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಪ್ರಾಯೋಗಿಕ, ವಾಸ್ತವಿಕ ಜ್ಞಾನವನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಈ ಭೇಟಿಯ ಸಮಯದಲ್ಲಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ತೋಟಗಾರಿಕಾ ತಜ್ಞರು ವಿವಿಧ ಬೆಳೆಗಳಾದ ಹಣ್ಣುಗಳು, ತರಕಾರಿಗಳು, ಹೂವುಗಳು ಮತ್ತು ಇತರ ತೋಟಗಾರಿಕಾ ಬೆಳೆಗಳ, ಕೃಷಿ ಪದ್ಧತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಗಿಡಗಳನ್ನು ನೆಡುವುದು, ಕಳೆ ತೆಗೆಯುವುದು, ಇಳುವರಿಯನ್ನು ಹೆಚ್ಚಿಸುವ ವಿಧಾನಗಳು ಮತ್ತು ರೋಗ ನಿಯಂತ್ರಣ ಕ್ರಮಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು. ಶಾಲಾ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಜೇಸನ್ ವಿಜಯ್ ಮೊನಿಸ್, ಅಧ್ಯಾಪಕಿಯರಾದ ವಿನಿತಾ ಹಾಗೂ ರೀನಾ ಜೊತೆಗಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.