ತಾಳೆ ಜಾತಿಗಳಲ್ಲಿ 2,600ರಷ್ಟು ಜಾತಿಯ ಮರಗಳಿದ್ದು ಅವು 180ರಷ್ಟು ಸಸ್ಯ ಕುಟುಂಬಗಳಿಗೆ ಸೇರಿವೆ.

ಲೋಬೋ ಕೋರ್ಟ್ ಕಡೆಯಿಂದ ಸಿಟಿ ಸೆಂಟರ್‌ಗೆ ಬರುವ ಮೂಲೆಯಲ್ಲಿ ಈ ತಾಳೆ ಬಿಟ್ಟ ಫಲ ಕಾಣಿಸುತ್ತದೆ. ನೋಡಲು ಅಡಕೆಯಂತೆ ಇದ್ದರೂ ಇದು ಅಡಕೆಯಲ್ಲ. ಅಲಂಕಾರಿಕ ಅಡಕೆ ಅಷ್ಟೆ.

ಅಡ ಎಂದರೆ ನಟ್. ಆದ್ದರಿಂದ ಇದು ಅಡಕೆ. ಕೆಲವರು ಇದನ್ನು ಅಡಿಕೆ ಎಂದು ಬರೆಯುವುದಿದೆ. ಅದು ಭಾಷಾ ರೀತ್ಯಾ ತಪ್ಪು.

ತೆಂಗು, ಪಾಮಾಯಿಲ್, ಡಬಲ್ ತೆಂಗು, ಕರ್ಜೂರ, ಈಚಲ ಇಂಥ ಕೆಲವದರ ಹೊರತು ಬಹುಪಾಲು ತಾಳೆ ಮರಗಳು ಅಲಂಕಾರ ಸಸ್ಯಗಳು.

ಲೋಡೋಸಿಯಾ ಎಂಬುದು ಡಬಲ್ ಕೋಕೊನಟ್, ಕೋಕೋ ಡೆ ಮೆರ್, ಲವ್ ಕೋಕೊನಟ್ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಟ್ಟು ಸೆಚೆಲಸ್ ದ್ವೀಪದಲ್ಲಿ ಲಭ್ಯವಿದೆ. ಇದರ ಕಾಯಿ ನಮ್ಮ ಎರಡು ತೆಂಗಿನಕಾಯಿ ಜೋಡಿಸಿದಂತಿದ್ದು ಮರವು ನಮ್ಮ ತಾಳಿ (ಈರೋಲ್) ಮರದ ದುಪ್ಪಟ್ಟು ದೊಡ್ಡದು ಇರುತ್ತದೆ. ಗಂಡು ಹೆಣ್ಣು ಮರ ಬೇರೆಬೇರೆ ಇವೆ.

ತಾಳೆ ಜಾತಿಯಲ್ಲಿ ಇದು ಜಗತ್ತಿನ ಅತಿ ದುಬಾರಿ ಫಲ. ಬಡವರು ಕೊಳ್ಳುವುದು ಸಾಧ್ಯವಿಲ್ಲ. ಕರ್ಜೂರವು ಈ ತಾಳೆ ಜಾತಿಯಲ್ಲಿ ಸಾರ್ವತ್ರಿಕ ಬಳಕೆಯಲ್ಲಿರುವ ಹಣ್ಣು. ಈಚಲು ಸಹ ಸಹ ಕರ್ಜೂರದ ಸಹ ಜಾತಿಯಾಗಿದೆ. ತಾಳೆಗಳಲ್ಲಿ 181 ಕುಟುಂಬ ಮತ್ತು 2,600 ಜಾತಿಗಳಿದ್ದು ಬಹುತೇಕ ಅಲಂಕಾರಿಕ ಮರಗಳು. ಎಣ್ಣಿ ತಾಳೆ ಇಂದು ಬಹು ಬೇಡಿಕೆ ಪಡೆದಿದೆ. ಪಾಮಾಯಿಲ್ ಬಳಕೆ ಎಲ್ಲ ಕಡೆ ಕಂಡುಬರುತ್ತದೆ.