ಮಾಲ ದ್ವೀಪಗಳಿಗೆ ಪ್ರತಿ ವರುಷ 13 ಲಕ್ಷಕ್ಕೂ ಹೆಚ್ಚು ಜನರು ಪ್ರವಾಸ ಬರುತ್ತಾರೆ. ಲಕ್ಷದ್ವೀಪಕ್ಕೆ ವರುಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಯ್ದಾರು ಸಾವಿರ. ಮಾಲ್ಡೀವ್ಸ್‌ನ ಮೂಲ ಸೌಕರ್ಯ ಮತ್ತು ಲಕ್ಷದ್ವೀಪದ ಅಸೌಕರ್ಯಗಳು ಇದಕ್ಕೆ ಕಾರಣ. ಮಾಲ ದ್ವೀಪಗಳಲ್ಲಿ 12 ತಿಂಗಳು ಬರುವ ಮಳೆಯನ್ನೇ ಕುಡಿಯಲು ಕಾಯುವ ಕಾಲವಿತ್ತು. ಇಂದು ನೀರಿನ ಕೊರತೆ ಇಲ್ಲ. ಲಕ್ಷದ್ವೀಪದ ಕವರತ್ತಿಯಲ್ಲಿ ಮಾತ್ರ ಒಂದು ನೀರು ಶುದ್ಧೀಕರಣ ಘಟಕ ಇದೆ. ಅದು ಸದಾ ಕೊರತೆ ಪೂರೈಕೆ.

ಲಕ್ಷದ್ವೀಪದಲ್ಲಿ ಒಂದು ಬಿಡದಿ, ಕೆಲವು ಟೆಂಟ್ ಬಾಡಿಗೆಗೆ ಸಿಗುತ್ತವೆ. ಮಾಲ್ಡೀವ್ಸ್ ಎಲ್ಲ ಆಧುನಿಕ ಸವಲತ್ತು ಒದಗಿಸುತ್ತದೆ. ಒಕ್ಕೂಟ ಸರಕಾರಗಳು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಬೆಳೆಸುವ ಯಾವ ಕೆಲಸವನ್ನೂ ಮಾಡಿಲ್ಲ. ನೆರೆಹೊರೆ ದೇಶಗಳ ಜೊತೆಗೆ ಜಗಳ, ಆಮೇಲೆ ಅವರಿಗೆ ಊಟ ಇಲ್ಲ ಎಂದು ಪ್ರಚಾರ ಮಾಡುವುದರಿಂದ ಯಾವ ಸಮಸ್ಯೆಯೂ ಪರಿಹಾರ ಆಗುವುದಿಲ್ಲ.