ಮಂಗಳೂರು:  ಕೊಂಕಣಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರತೆಯನ್ನು ಕಾಪಾಡಿಕೊಂಡು ಬಂದಿರುವ ಮಾಂಡ್ ಸೊಭಾಣ್ ಸಂಸ್ಥೆಯ ವತಿಯಿಂದ ನಡೆಯುವ ತಿಂಗಳ ವೇದಿಕೆ ಸರಣಿಯ 280 ನೇ ಕಾರ್ಯಕ್ರಮವು ಏಪ್ರಿಲ್ 7 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.

ಮಾಂಡ್ ನಾಟಕ ತಂಡದ ಸದಸ್ಯ ರೆನಾಲ್ಡ್ ಲೋಬೊ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕೇರನ್ ಮಾಡ್ತಾ  ಹಾಗೂ ಎಲ್ರೊನ್ ರೊಡ್ರಿಗಸ್ ಇವರು ವೇದಿಕೆಯಲ್ಲಿದ್ದರು.

ನಂತರ ಜೆ.ಪಿ. ತೂಮಿನಾಡು ಇವರ ಮೂಲಕತೆ ಆಧರಿಸಿ ನೆಲ್ಲು ಪೆರ್ಮನ್ನೂರು ರಚಿಸಿ, ನಿರ್ದೇಶಿಸಿದ ಎಸ್ ಬಿ ಜಿ ಟ್ರಾವೆಲ್ಸ್ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಹಲವಾರು ಪ್ರದರ್ಶನಗಳನ್ನು ಕಂಡ ಈ ನಾಟಕವು ಜನರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ನೆಲ್ಲು ಪೆರ್ಮನ್ನೂರ್, ಲ್ಯಾನ್ಸಿ ಬಂಟ್ವಾಳ್, ಸಂದೀಪ್ ಮಸ್ಕರೇನ್ಹಸ್, ದೀಪಕ್ ಕುಟಿನ್ಹಾ, ಮರಿಯಾ ಜೊಯ್ಸ್, ಜಾಸ್ಮಿನ್ ಡಿಸೋಜ, ಅಸುಂತಾ ಪಾಯ್ಸ್, ಜೊಯೆಲ್ ಪಿಂಟೊ, ಗ್ಲೆರನ್ ವಾಸ್, ಕೇತನ್ ರೊಡ್ರಿಗಸ್ ನಟಿಸಿದ್ದರು. ವಿಲ್ಸನ್ ಕಟೀಲ್ ಸಾಹಿತ್ಯಕ್ಕೆ ವನೀಲ್ ವೇಗಸ್ ಸಂಗೀತ  ಹಾಗೂ ರವೀನ್ ಮಾರ್ಟಿಸ್ ಹಿನ್ನಲೆ ಸಂಗೀತ ನೀಡಿದ್ದರು.