ಮಂಗಳೂರು: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಜನವರಿ ‌ಒಂಭತ್ತು ತಾರೀಖು ತನ್ನ ಸುವರ್ಣ ಮಹೋತ್ಸವವನ್ನು ಮಂಗಳೂರು ಪುರಭವನದಲ್ಲಿ ನಡೆಯದೆ. ಭಡ್ಕಳದ ಮುಸ್ಲಿಂ ಜನರು ಕೊಂಕಣಿ ಮಾತೃಭಾಷೆ ಹೊಂದಿರುವ ಕಾರಣ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ‌ಪದಾಧಿಕಾರಿಗಳು ಜಮಾತ್ ಉಪಾಧ್ಯಕ್ಷ ಕೆ ಎಮ್ ಹುಸೈನ್ ಅವರಿಗೆ ಭೇಟಿಯಾದರು. 
ಕೊಂಕಣಿ ಭಾಷೆಯ ಈ  ತಾಯಿಯ ಕೆಲಸಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಲು ಭಟ್ಕಳ ಜಮಾತ್ ತಯಾರಿದೆ ಎಂದು ‌ಈ ಸಂದರ್ಭದಲ್ಲಿ ‌ಹುಸೈನ್ ಭರವಸೆಯನ್ನು ನೀಡಿದರು.
ಅಧ್ಯಕ್ಷ ಕೆ ವಸಂತ ರಾವ್ ಮತ್ತು ಕಾರ್ಯದರ್ಶಿ ರೇಮಂಡ್ ಡಿಕೂನಾ  ಇಡೀ ಸುವರ್ಣ ಮಹೋತ್ಸವದ ಬಗ್ಗೆ ವಿವರಣೆ ನೀಡಿದರು. ಜಮಾತ್ ಸದಸ್ಯ ‌ತಲಾಹ್ ಹಾಜರಿದ್ದರು.