ಕಾರ್ಕಳ: ತಮ್ಮ ತಂದೆ ತಾಯಿಯವರನ್ನು ಕಳಕೊಂಡ ಸಂದರ್ಭದಲ್ಲಿಯೂ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 98.67% ಅಂಕ ಗಳಿಸಿ ರಾಜ್ಯದಲ್ಲಿಯೇ 6ನೇ ಸ್ಥಾನವನ್ನು ಪಡೆದ ಪ್ರತಿಭಾನ್ವಿತ ವಿಧ್ಯಾರ್ಥಿನಿಯಾದ ಕುಮಾರಿ ರಕ್ಷಿತಾಳನ್ನು ಪೋಷಕರೊಂದಿಗೆ ಸಂಘದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಸಂಗ್ರಹಿಸಿದ ಸಹಾಯ ಧನವನ್ನು ಹಸ್ತಾಂತರಿಸಲಾಯಿತು. ಪ್ರಾರಂಭದಲ್ಲಿ ಸಂಘದ ಅಧ್ಯಕ್ಷರಾದ ಜೋಕಿಂ ಮೈಕಲ್ ಹೆಚ್. ಪಿಂಟೊ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಹೈಸ್ಕೂಲ್ ವಿಭಾಗದ ಪ್ರತಿನಿಧಿಯಾದ ರಾಜಾರಾಮ್ ಶೇರ್ವೇಗಾರ್ ಪ್ರಾಸ್ತವಿಕವಾಗಿ ಮಾತನಾಡಿ ಪ್ರತಿಭಾನ್ವಿತ ವಿದ್ಯಾರ್ಥಿ ಹಾಗೂ ಅವಳ ಸಹೋದರನಾದ ರಂಜಿತ್ ಇವರಿಗೆ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಬಾಲಕೃಷ್ಣ ಎನ್. ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸಂಘದ ಕೋಶಾಧಿಕಾರಿಯಾದ ಬಿ.ವಿ.ಶಿವರಾಮ್ ರಾವ್ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯವರಾದ ಉಮೇಶ್ ಕೆ.ಎಸ್. ವಂದಿಸಿದರು.