ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಕೆಲವಾರು ತಿಂಗಳುಗಳಿಂದ ಅಮೃತ್ 2.0 ಸಮಗ್ರ ಕುಡಿಯುವ ನೀರಿನ ನೂತನ ಸರಬರಾಜು ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು ಕಾರ್ಕಳ ರಾಮಸಮುದ್ರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಜಿ ಎಲ್ ಎಸ್ ಆರ್ ಹಾಗೂ ಫಿಲ್ಟರ್ ಮೀಡಿಯಾವನ್ನು ರಾಮಸಮುದ್ರದಲ್ಲಿರುವ ಜಾಲಶುದ್ದಿಕಾರಣ ಘಟಕದಲ್ಲಿರುವ ಓವರ ಹೆಡ್ ಟ್ಯಾಂಕ್ಗೆ ಸಂಪರ್ಕಿಸಲು ಹಾಗೂ ಪರಿವರ್ತಕಕ್ಕೆ ವಿದ್ಯುತ್ ಸಂಪರ್ಕ ನೀಡಲು ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಳಿಸುವಂತೆ ಜಲಮಂಡಳಿ ಅಧಿಕಾರಿಗಳ ಕೋರಿಕೆ ಮೇರೆಗೆ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಆಗಸ್ಟ್ 2 ಮತ್ತು 3 ರಂದು ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು.
ಮಾತ್ರವಲ್ಲದೆ ಕೆಲವೊಂದು ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 3 ರಿಂದ 4 ದಿನಗಳವರೆಗೆ ನೀರು ಸರಬರಾಜು ವ್ಯಯವಾಗಲಿ ದ್ದು ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸುವಂತೆ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮನವಿ ಮಾಡಿದ್ದಾರೆ.