ಕಾರ್ಕಳ: ಶಿಕ್ಷಣದೊಂದಿಗೆ ಶಿಸ್ತನ್ನು ಪರಿಪಾಲಿಸಬೇಕು ಆಗ ಮಾತ್ರ ನಾವು ಕಲಿತ ಶಿಕ್ಷಣಕ್ಕೆ ಮಹತ್ವ ಬರುತ್ತದೆ ನಾವು ನಮ್ಮ ತಂದೆ ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸಬೇಕು ಅದಲ್ಲದೆ ಈಗಿನ ಕಾಲದಲ್ಲಿ ಕಾಲಘಟ್ಟದಲ್ಲಿ ಶಿಕ್ಷಣ ಅತಿ ಮುಖ್ಯವಾಗಿದೆ. 

ವಿದ್ಯೆ ಇಲ್ಲದವನು ಪಶುವಿಗೆ ಸಮಾನ ಅದಲ್ಲದೆ ಈಗಿನ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವು ಅತಿ ಮುಖ್ಯವಾಗಿದೆ ಎಂದು 10 ಕಂಪ್ಯೂಟರ್ ಗಳನ್ನು ದಾನವಾಗಿ ನೀಡಿದ ಕಮಲಾಕ್ಷ ಕಾಮತ್  ಹವಾನಿಯಂತ್ರಿತ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿ ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ ಕರಿಯಕಲ್ಲು ಇದರ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೀರಾ ಕಾಮತ್ ಭಾವಚಿತ್ರವನ್ನು ಯುವಶಕ್ತಿ ನಿರ್ದೇಶಕಿ ಸುರೇಖಾ ಪ್ರದೀಪ್ ಕೋಟ್ಯಾನ್ ಅನಾವರಣ ಮಾಡಿದರು. ಸಂಚಾಲಕರಾದ ಅಬ್ದುಲ್ ಖಾಲಿಕ್ ಪ್ರಸ್ತಾಪಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾದ ವಿಜಯ ಶೆಟ್ಟಿ ಹಾಗೂ ವಸಂತ್ ಎಂ ವಿದ್ಯಾರ್ಥಿಗಳಿಗೆ ಹಿತನುಡಿ ನೀಡಿದರು. ಹಾಗೂ ಕಂಪ್ಯೂಟರ್ ಕೊಠಡಿಗೆ ಏರ್ ಕಂಡೀಶನ್ ನೀಡಿದ ಅಧ್ಯಕ್ಷರಾದ ನರಸಿಂಹ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ವೇದಿಕೆಯಲ್ಲಿ ಶಾಲೆ ಅಧ್ಯಕ್ಷರಾದ ಸುಧಾಕರ್ ಪ್ರಭು ಹಾಗೂ ಮುಖ್ಯ ಶಿಕ್ಷಕಿ ನಳಿನಾಕ್ಷಿ ಹೆಗಡೆ ಉಪಸ್ಥಿತರಿದ್ದರು.