ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ  ಸೆಪ್ಟೆಂಬರ್ 6, 2025 ರಂದು ಕಾರ್ಕಳ ತಾಲೂಕು ಮಟ್ಟದ ಹುಡುಗರ ಮತ್ತು ಹುಡುಗಿಯರ ವಿಭಾಗಗಳ ಫುಟ್ಬಾಲ್ ಪಂದ್ಯಾಟ ಗಾಂಧಿ ಮೈದಾನ ಕಾರ್ಕಳದಲ್ಲಿ ನಡೆಯಿತು.

ಇದರಲ್ಲಿ ಹುಡುಗಿಯರ ವಿಭಾಗದಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನದೊಂದಿಗೆ ಟ್ರೋಫಿಯನ್ನು ಗೆದ್ದು, ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ವಿದ್ಯಾರ್ಥಿನಿಯರ ಸಾಧನೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಕ್ರೀಡಾ ಮುಖ್ಯಸ್ಥರಾದ ಮಹೇಶ್ ಆರ್. ಶೆಣೈ ಕೆ, ಬೋಧಕ - ಬೋಧಕೇತರ ವರ್ಗದವರು ಶ್ಲಾಘಿಸಿದ್ದಾರೆ.