ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮೂಡುಬಿದಿರೆ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ಸಪ್ಟೆಂಬರ್ 29 ರಿಂದ ಅಕ್ಟೋಬರ್ 1 ರ ತನಕ ಶಾರದಾ ಮಹೋತ್ಸವ ನಡೆಯಲಿದೆ. 36 ವರ್ಷಗಳಿಂದ ವೀರ ಮಾರುತಿ ಸೇವಾ ಟ್ರಸ್ಟ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಸಪ್ಟೆಂಬರ್ 27ರಂದು ಸಂಜೆ ಶಾರದಾ ದೇವಿಯ ವಿಗ್ರಹ ಸ್ವರಾಜ್ಯ ಮೈದಾನದ ಆದಿಶಕ್ತಿ ದೇವಸ್ಥಾನದಿಂದ ಬರಲಿದೆ. 29ರಂದು ಗಣಹೋಮದ ತರುವಾಯ ದೇವಿಯ ಪ್ರತಿಷ್ಠೆ ನಡೆಯಲಿದೆ. ತದ ನಂತರ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ, ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ, ಭಜನೆ, ದುರ್ಗಾ ನಮಸ್ಕಾರ ಪೂಜೆ, ದೀಪಾಲಂಕಾರ ಸೇವೆ, ರಂಗ ಪೂಜೆಗಳು ನಡೆಯಲಿವೆ.
ಸಪ್ಟೆಂಬರ್ 30ರಂದು ಲಕ್ಷ ಕುಂಕುಮಾರ್ಚನೆ, ಚಂಡಿಕಾ ಹವನ, ಭಕ್ತಿ ಗೀತೆ ಸ್ಪರ್ಧೆ, ಭಜನೆ, ಶಾಸ್ತ್ರೀಯ ಸಂಗೀತ, ರಂಗ ಪೂಜೆ ನಡೆಯುವುದು.
ಅಕ್ಟೋಬರ್ 1 ರಂದು ಮುದ್ದು ಶಾರದೆ ಸ್ಪರ್ಧೆ, ಮಧ್ಯಾಹ್ನ ವಿಸರ್ಜನಾ ಪೂಜೆ, ಸಂಜೆ ಅರಳು ಮಲ್ಲಿಗೆ ಮುಡಿದ ಸರ್ವಾಲಂಕಾರ ಬೂಷಿತೆ ಶಾರದಾ ಮಾತೆಯ ಶೋಭಾ ಯಾತ್ರೆ ನಡೆದು ಅಲಂಗಾರು ಮಾನಸಗಂಗೋತ್ರಿ ಸರೋವರದಲ್ಲಿ ಜಲ ಸ್ತಂಭನ ಗೊಳ್ಳಲಿದೆ.