ಕಾರ್ಕಳ: ಶ್ರೀ ಜಿನವಾಣಿ ಮಹಿಳಾ ಸಮಾಜ, ಕಾರ್ಕಳ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು. ಅಧ್ಯಕ್ಷರಾಗಿ ಬಿ. ವಿನಯ ಯುವರಾಜ ಆರಿಗ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಮೋಹಿನಿ ವರ್ಧಮಾನ, ಕಾರ್ಯದರ್ಶಿಯಾಗಿ ರಾಜಶ್ರೀ ವಸಂತ್ ಬಂಗ, ಸಹಕಾರ್ಯದರ್ಶಿಯಾಗಿ ಸುಕುಮಾರಿ ರಘುಚಂದ್ರ, ಕೋಶಾಧಿಕಾರಿಯಾಗಿ ಪ್ರೇಮ ಭವ್ಯ ಕುಮಾರ್ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.